ವಿದ್ಯುತ್ ಸ್ಪರ್ಶದಿಂದ ಮರಣ ಹೊಂದಿದ ಯೋಧ ಮಂಜುನಾಥ ಗಿಡ್ಡಮಲ್ಲಣ್ಣನರ ಕುಟುಂಬಕ್ಕೆ ಸೂರ್ಯಮಣಿ ಸಾಹು ಅವರು 1 ಕೋಟಿ ರೂ. ಚೆಕ್ ವಿತರಿಸಿದರು. ಗುರುರಾಜ್ ಬಳಗಾನೂರ, ಶಿವಕುಮಾರ ಕೆ, ಇತರರಿದ್ದರು.
Published on:
Copied
Follow Us
ಗದಗ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರು ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಗಿಡ್ಡಮಲ್ಲಣ್ಣನರ ವಿದ್ಯುತ್ ಸ್ಪರ್ಶದಿಂದ ಮರಣ ಹೊಂದಿದ್ದರಿಂದ ರಕ್ಷಕ್ ಪ್ಲಸ್ ಯೋಜನೆಯಡಿ 1 ಕೋಟಿ ರೂಪಾಯಿಗಳನ್ನು ಅವರ ಕುಟುಂಬಕ್ಕೆ ಹುಬ್ಬಳ್ಳಿ ವೃತ್ತಾಧಿಕಾರಿ ಸೂರ್ಯಮಣಿ ಸಾಹು ವಿತರಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಬ್ಯಾಂಕ್ ಮಂಜುನಾಥ ಅವರ ಕುಟುಂಬದ ಸಹಾಯಕ್ಕೆ ಧಾವಿಸುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ತನ್ನದೇ ಆದ ಇತಿಹಾಸವಿದ್ದು, ಸದಾ ಸಮಾಜಮುಖಿ ಕಾರ್ಯದಲ್ಲಿ ತೋಡಗಿದೆ ಎಂದರು.
ಯೋಧನ ತಂದೆ, ತಾಯಿ, ಪತ್ನಿ, ಮಗು ಸೇರಿದಂತೆ ಗುರುರಾಜ್ ಬಳಗಾನೂರ, ಸೀನಿಯರ್ ಮ್ಯಾನೇಜರ್ ಶಿವಕುಮಾರ ಕೆ, ಮ್ಯಾನೇಜರ್ ಡಿ.ಎಚ್. ಅಸ್ಲಂಭಾಷಾ, ಆರ್‌ಜೆ ಮೀಡಿಯಾ ಸಮೂಹ ಸಂಸ್ಥೆ ಮುಖ್ಯಸ್ಥ ಡಾ. ರವೀಂದ್ರ ಜಲರಡ್ಡಿ, ದೇವರಾಜ, ರಮೇಶ ಅನಂತಪುರ, ಅಕ್ಷತಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.