ಗದಗ: ಲೋಕಸಭಾ ಚುಮಾವಣೆಗೂ ಮುನ್ನ ಹಮ್ಮಿಕೊಂಡಿದ್ದ ಜನತಾ ಸಂವಾದದಲ್ಲಿ ಗದಗ-ಬೆಟಗೇರಿ ಅವಳಿ ನಗರದ ಮಹಿಳೆಯರಿಗೆ ನೀಡಿದ್ದ ಭರವಸೆಯನ್ನ ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ಸಂಸದ ಬಸವರಾಜ್ ಬೊಮ್ಮಾಯಿ ಅವರು ನಡೆದುಕೊಂಡಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗದಗ ಜನತಾ ಸಂವಾದ ಕಾರ್ಯಕ್ರಮದಲ್ಲಿ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ, ಯುವಕರು ಉದ್ಯೋಗ ಸೃಷ್ಟಿಯ ಬಗ್ಗೆ, ರೈತರು ಜಾಲವಾಡಗಿ ಏತ ನೀರಾವರಿ ಯೋಜನೆಯ ಚಾಲನೆ ನೀಡುವ ಕುರಿತು ಮನವಿ ಮಾಡಿಕೊಂಡಿದ್ದರು. ಅದರಂತೆ, ಮೊದಲಾರ್ಧದಲ್ಲಿ ಗದಗ-ಬೆಟಗೇರಿ ಜನರ ಕುಡಿಯುವ ನೀರಿನ ದಾಹ ನೀಗಿಸಲು ಸಂಸದರಾದ ಬಸವರಾಜ್ ಬೊಮ್ಮಾಯಿ ಅವರ ಭಗೀರಥ ಪ್ರಯತ್ನ ಫಲಪ್ರದವಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಮತದಾರರಿಗೆ ನೀಡಿದ್ದ ಭರವಸೆಯನ್ನು ಕೇವಲ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಈಡೇರಿಸುವ ಮೂಲಕ ಬೊಮ್ಮಾಯಿ ಅವರು ತಮ್ಮ ದೂರದೃಷ್ಟಿ ಹಾಗೂ ಕರ್ತವ್ಯನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಸಂಸದ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ 'ಅಮೃತ್ 2.0' ಯೋಜನೆಯಡಿ ಬರೊಬ್ಬರಿ 42 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾತು ಕೊಟ್ಟರೆ ಅದನ್ನು ತಪ್ಪದ ಜನನಾಯಕ ತಾವೆಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸಂಸದರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ವರ್ಷಗಳಲ್ಲಿ ಗದಗ ಜಿಲ್ಲೆಯ ಜನರ ನಾಡಿಮಿಡಿತವನ್ನು ಅರಿತು ಬೊಮ್ಮಾಯಿ ಅವರು ಜನಪರ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ. ಕೇವಲ ಕುಡಿಯುವ ನೀರಷ್ಟೇ ಅಲ್ಲದೆ, ಜಿಲ್ಲೆಯ ಸಮಗ್ರ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಹಲವು ಬೃಹತ್
ಗಿಡಮೂಲಿಕೆಗಳ ಸಂಜೀವಿನಿ ಎಂದೇ ಪ್ರಸಿದ್ಧವಾಗಿರುವ ಕಪ್ಪತ್ತಗುಡ್ಡದ ಜೀವವೈವಿಧ್ಯತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅತ್ಯಾಧುನಿಕ ಆಯುರ್ವೇದಿಕ್ ಪಾರ್ಕ್ ನಿರ್ಮಾಣದ ಯೋಜನೆ ಪ್ರಮುಖವಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಕಪ್ಪತ್ತಗುಡ್ಡದಲ್ಲಿ ಆಯುರ್ವೇದಿಕ್ ಪಾರ್ಕ್ ನಿರ್ಮಾಣ ಮಾಡುವರೆಂಬ ವಿಶ್ವಾಸವಿದೆ. ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನೂತನ ಕಾರ್ಖಾನೆಗಳು ಮತ್ತು ಕೈಗಾರಿಕಾ ವಲಯಗಳ ಸ್ಥಾಪನೆ ಅತ್ಯಗತ್ಯವಾಗಿದೆ. ಬೊಮ್ಮಾಯಿ ಅವರು ಕೈಗಾರಿಕಾ ಕ್ರಾಂತಿ ಮಾಡುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸುತ್ತಾರೆಂಬ ನಂಬಿಕೆಯೂ ದೃಢವಾಗಿದೆ.
ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಪಡೆದುಕೊಳ್ಳುವ ರಾಜಕಾರಣಿಗಳ ಮಧ್ಯೆ, ಬಸವರಾಜ್ ಬೊಮ್ಮಾಯಿ ಅವರು ಅತ್ಯಂತ ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ಪ್ರಚಾರಪ್ರಿಯರಲ್ಲ, ಬದಲಿಗೆ ಆಡಂಬರವಿಲ್ಲದೆ ನಿಶ್ಯಬ್ದವಾಗಿ ಕೆಲಸ ಮಾಡುವ ಕಾರ್ಯಪ್ರಿಯರು. ಸುಳ್ಳು ಭರವಸೆಗಳನ್ನು ನೀಡಿ ಜನರ ಹಾದಿ ತಪ್ಪಿಸುವ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು, ಹೇಳಿದ್ದನ್ನು ಮಾಡಿ ತೋರಿಸುವ ಅವರ ಈ ಗುಣ ಗದಗ ಜಿಲ್ಲೆಯ ಮತದಾರರ ಸೌಭಾಗ್ಯವೇ ಸರಿ. ಕೇವಲ ಚುನಾವಣೆ ಮುಂಚೆ ಸುಳ್ಳು ಆಶ್ವಾಸನೆಗಳನ್ನು ನೀಡಿ, ಸಾರ್ವಜನಿಕರನ್ನು ದಿಕ್ಕು ತಪ್ಪಿಸಿ, ಅಧಿಕಾರ ಗಿಟ್ಟಿಸಿಕೊಳ್ಳುವ ಹಾಗೂ ಕೇವಲ ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಪ್ರಚಾರ ಪ್ರಿಯ ರಾಜಕಾರಣಿಗಳ ಬಗ್ಗೆ ಗದಗ ಜನರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲಸ ಮಾಡುವವರನ್ನು ಗುರುತಿಸುವ ವಿವೇಕ ಗದಗ ಜಿಲ್ಲೆಯ ಜನತೆಗಿದೆ. ಕೊಟ್ಟ ಮಾತಿನಂತೆ ನಡೆದುಕೊಂಡು ಗದಗ ಜಿಲ್ಲೆಯನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿರುವ ಸಂಸದ ಬಸವರಾಜ್ ಬೊಮ್ಮಾಯಿ ಅವರ ಕಾರ್ಯವೈಖರಿಗೆ ಶೀಘ್ರವೇ ಕೃತಜ್ಞತೆ ಸಲ್ಲಿಸಬೇಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಡಿಯುವ ನೀರು, ಜಾಲವಾಡಗಿ ಏತ ನೀರಾವರಿ, ರಿಂಗ್ ರಸ್ತೆ ಅಭಿವೃದ್ಧಿಗಾಗಿ ಶ್ರಮಿಸಿದ ಸಂಸದರಾದ ಬಸವರಾಜ್ ಬೊಮ್ಮಾಯಿ, ಶಾಸಕರಾದ ಸಿ.ಸಿ.ಪಾಟೀಲ್, ಮಾಜಿ ಸಂಸದರಾದ ಶಿವಕುಮಾರ್ ಉದಾಸಿ, ಮಾಜಿ ಶಾಸಕರಾದ ಕಳಕಪ್ಪ ಬಂಡಿ ಅವರಿಗೆ ಶೀಘ್ರವೇ ಗದಗ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅನಿಲ್ ಮೆಣಸಿನಕಾಯಿ ಅವರು ತಿಳಿಸಿದ್ದಾರೆ.