Eye ಲಕ್ಷ್ಮೇಶ್ವರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಲಕ್ಷ್ಮೇಶ್ವರದ ಜ್ಯೋತಿ ನರ್ಸಿಂಗ್ ಹೋಂ ಆವರಣದಲ್ಲಿ ಆಯೋಜಿಸಿದ್ದ ನೇತ್ರ ತಪಾಸಣಾ ಶಿಬಿರವನ್ನು ಹಿರಿಯ ವೈದ್ಯ ಡಾ.ಪಿ.ಡಿ. ತೋಟದ ಉದ್ಘಾಟಿಸಿದರು. ಸಿ.ಆರ್. ಲಕ್ಕುಂಡಿಮಠ, ಚಂಬಣ್ಣ ಬಾಳಿಕಾಯಿ ಇತರರಿದ್ದರು.
ಲಕ್ಷ್ಮೇಶ್ವರದ ಜ್ಯೋತಿ ನರ್ಸಿಂಗ್ ಹೋಂ ಆವರಣದಲ್ಲಿ ಆಯೋಜಿಸಿದ್ದ ನೇತ್ರ ತಪಾಸಣಾ ಶಿಬಿರವನ್ನು ಹಿರಿಯ ವೈದ್ಯ ಡಾ.ಪಿ.ಡಿ. ತೋಟದ ಉದ್ಘಾಟಿಸಿದರು. ಸಿ.ಆರ್. ಲಕ್ಕುಂಡಿಮಠ, ಚಂಬಣ್ಣ ಬಾಳಿಕಾಯಿ ಇತರರಿದ್ದರು.
Published on

ಲಕ್ಷ್ಮೇಶ್ವರ: ಪಟ್ಟಣದ ಜ್ಯೋತಿ ನರ್ಸಿಂಗ್ ಹೋಂ (

Eye

) ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಿಬಿರ ಯಶಸ್ವಿಯಾಗಿ ಜರುಗಿತು. ಹುಬ್ಬಳ್ಳಿಯ ಶ್ರೀಗುರು ಮಹಿಪತಿರಾಜ ಸಂಸ್ಥೆ, ಡಾ. ಎಂ.ಎಂ. ಜ್ಯೋತಿ ನೇತ್ರ ತಜ್ಞ ವಿಜ್ಞಾನ ಸಂಸ್ಥೆ, ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ತಾಲೂಕು ವೈದ್ಯರ ಸಂಘ, ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿಸಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ವೈದ್ಯ ಡಾ.ಪಿ.ಡಿ. ತೋಟದ, ತಾಲೂಕು ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿದರು. ಐ.ಎಸ್. ಮಡಿವಾಳರ, ಎಂ.ಕೆ. ಕಳ್ಳಿಮಠ, ಡಾ. ಹೂವಿನ, ನೀಲಪ್ಪ ಕರ್ಜೆಕಣ್ಣವರ, ಸೂಗೀರಪ್ಪ ವಾಲಿಶೆಟ್ಟರ, ನಿವೃತ್ತ ಶಿಕ್ಷಕ ಮಲ್ಲಸಮುದ್ರ, ಡಾ. ಪ್ರಸನ್ನ ಕುಲಕರ್ಣಿ, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿ, ಧರ್ಮಸ್ಥಳ ಸಂಸ್ಥೆ ಅಧಿಕಾರಿ ಇದ್ದರು. 50ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net