ಗಜೇಂದ್ರಗಡ: ಮಾಜಿ ಸಚಿವ ಕಳಕಪ್ಪ ಜಿ. ಬಂಡಿ ಅವರ ಜನ್ಮದಿನದ (BIRTHDAY ) ಪ್ರಯುಕ್ತ ಬಿಜೆಪಿ ವಿವಿಧ ಮೋರ್ಚಾಗಳಿಂದ ಹಲವು ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಆಗಸ್ಟ್ 19ರಂದು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಒಬಿಸಿ ಮೋರ್ಚಾ ರೋಣ ಮಂಡಲದ ವತಿಯಿಂದ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಗುವುದು. ಕುಂಟೋಜಿ ಗ್ರಾಮದಲ್ಲಿ ನಾರಾಯಣ ಹೃದಯಾಲಯ, ಪದ್ಮ ಐಕೇರ್ ಆಪ್ಟಿಕಲ್ಸ್ ಹಾಗೂ ಖ್ಯಾತ ತಜ್ಞ ವೈದ್ಯರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ರೋಣ ಮಂಡಲದ ಎಸ್‌ಟಿ ಮೋರ್ಚಾದಿಂದ ಚಿಲ್ಜೇರಿ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್‌ಸಿ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾ ಹಾಗೂ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ರೋಣ ನಗರದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಬ್ರೆಡ್ ಮತ್ತು ಹಣ್ಣು ವಿತರಣೆ ಕಾರ್ಯಕ್ರಮ ಆಯೋಜನೆ, ರೈತ ಮೋರ್ಚಾ ರೋಣ ಮಂಡಲದ ವತಿಯಿಂದ ರಾಜೂರ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ಸಿಹಿ ಭೋಜನ ಏರ್ಪಡಿಸುವುದರ ಜತೆಗೆ ಸಸಿ ನೆಡುವ ಕಾರ್ಯಕ್ರಮ ಯುವ ಮೋರ್ಚಾ ರೋಣ ಮಂಡಲದ ವತಿಯಿಂದ ಅರಹುಣಿಸಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ, ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಿ, ನಂತರ ಸಿಹಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.