ಜನರ ಸಹಕಾರದಿಂದ ಅರಣ್ಯ ಸಂಪತ್ತು ಸಮೃದ್ಧ forest

ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಕಾಡ್ಗಿಚ್ಚು ತಡೆ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ನೀಲಮ್ಮ ಅಳವಂಡಿ, ಮಂಜುನಾಥ ಮೇಗಲಮನಿ ಇತರರಿದ್ದರು.
ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಕಾಡ್ಗಿಚ್ಚು ತಡೆ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ನೀಲಮ್ಮ ಅಳವಂಡಿ, ಮಂಜುನಾಥ ಮೇಗಲಮನಿ ಇತರರಿದ್ದರು.
Published on
ತಾಲೂಕಿನ ಡೋಣಿ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಪ್ಪತಗುಡ್ಡ ವನ್ಯಜೀವಿಧಾಮದಲ್ಲಿ ವಾಲಿಬಾಲ್ ಪಂದ್ಯಾವಳಿ, ಕಾಡ್ಗಿಚ್ಚು ತಡೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಪ್ಪತಗುಡ್ಡ ವೀಕ್ಷಿಸಲು ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಇಂತಹ ಸಸ್ಯ ಸಂಪತ್ತನ್ನು ಸುತ್ತಮುತ್ತಲಿನ ಗ್ರಾಮಸ್ಥರು ರಕ್ಷಕರಂತೆ ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಆರ್​ಎಫ್​ಒ ಮಂಜುನಾಥ ಮೇಗಲಮನಿ ಮಾತನಾಡಿ, ಮೌಢ್ಯ, ಕಂದಾಚಾರಕ್ಕೆ ಒಳಗಾಗಿ ಬೆಂಕಿ ಹಚ್ಚಬೇಡಿ. ಕಪ್ಪತಗುಡ್ಡ ನಮ್ಮೆಲ್ಲರ ಆಸ್ತಿ ಎಂದು ಭಾವಿಸಿ ಕಾಪಾಡಬೇಕು. 400ಕ್ಕೂ ಹೆಚ್ಚು ಔಷಧೀಯ ಸಸ್ಯ ಸಂಪತ್ತು, 23ಕ್ಕೂ ಹೆಚ್ಚು ವನ್ಯಪ್ರಾಣಿಗಳ ಸಂಪತ್ತು ಇದ್ದು ಇವೆಲ್ಲವೂ ನಮ್ಮ ಸಂಪತ್ತು ಎಂದು ಉಳಿಸಿ ಬೆಳೆಸಬೇಕಾಗಿದೆ. ಕಪ್ಪತಗುಡ್ಡಕ್ಕೆ ಬೆಂಕಿ ಹಚ್ಚುವುದರಿಂದ ಔಷಧೀಯ ಸಸ್ಯ ಸಂಪತ್ತು ಮತ್ತು ಪ್ರಾಣಿಗಳು ಸಾವು ಆಗುತ್ತದೆ ಎಂದರು.
ಶಂಕರಗೌಡ ಜಾಯನಗೌಡ್ರ, ಸೋಮಣ್ಣ ಹೈತಾಪೂರ, ಭರಮಪ್ಪ ಕಿಲಾರಿ, ಸಿದ್ದು ಸತ್ಯಣ್ಣವರ ಮಾತನಾಡಿದರು. ಡಂಬಳ ಹೋಬಳಿಯ ಗ್ರಾಮಗಳ 485ಕುರಿ ಕಾಯುವವರಿಗೆ ಹೊಟ್ಟೆಚೀಲ, ಬ್ಯಾಟರಿ, ಸ್ಟೀಲ್ ನೀರಿನ ಬಾಟಲ್ ವಿತರಿಸಲಾಯಿತು. ಕೃಷಿಯಲ್ಲಿ ಅರಣ್ಯ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 35 ಸಾಧಕರಿಗೆ, ಯೋಗಾಸನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕಿನ 23 ಗ್ರಾ.ಪಂ.ಗಳಿಗೆ ಕಪ್ಪತಗುಡ್ಡದಿಂದ ಆಗುವ ಪರಿಸರದ ಲಾಭಗಳ ಕುರಿತು ಮಾಹಿತಿಬೋರ್ಡ್ ವಿತರಿಸಲಾಯಿತು. ಕಲಾವಿದ ನಿಂಗಪ್ಪ ಗುಡ್ಡದ ಸಂಗಡಿಗರು ಕಪ್ಪತಗುಡ್ಡದ ಕುರಿತು ಜಾನಪದ ಹಾಡುಗಳನ್ನು ಹಾಡಿ ಜಾಗೃತಿ ಮೂಡಿಸಿದರು.
ಡೋಣಿ ಗ್ರಾ.ಪಂ.ಅಧ್ಯಕ್ಷೆ ನೀಲಮ್ಮ ಅಳವಂಡಿ, ಕುಮಾರಸ್ವಾಮಿ ಮಠದ, ರಾಮಣ್ಣ ಮೇಗಲಮನಿ, ಲಕ್ಷ್ಮಿ ಸೊಗಟಿ, ಕಾಶಪ್ಪ ಅಳವಂಡಿ, ರಮೇಶ ಪವಾರ, ಗೌಸಿದ್ದಯ್ಯ ಹಳ್ಳಿಕೇರಿಮಠ, ನಿಂಗನಗೌಡ ಹರ್ತಿ, ಹನಮಪ್ಪ ಗೋಡಿ, ಕಾಶಪ್ಪ ಹೊನ್ನೂರ, ಸಿದ್ಧನಗೌಡ ಪಾಟೀಲ, ಸತ್ಯಪ್ಪ ಚಲವಾದಿ, ಮಹಾದೇವಪ್ಪ ಗುಂಜಿ, ಭರಮಗೌಡ ಪಾಟೀಲ, ಈಶಪ್ಪ ಓಲಿ, ಮಳ್ಳಪ್ಪ ಜೋಂಡಿ, ಮೈಲಾರಪ್ಪ ಮಡಿವಾಳರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net