ಲಕ್ಷ್ಮೇಶ್ವರ: ಸಾಲಬಾಧೆಗೆ ಮನನೊಂದು ವಿಷ ಸೇವಿಸಿ ರೈತ ಆತ್ಮಹತ್ಯೆ Farmer suicide ಮಾಡಿಕೊಂಡ ಘಟನೆ ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಶಿವಪ್ಪ ಮೇಟಿ (40) ಆತ್ಮಹತ್ಯೆ ಮಾಡಿಕೊಂಡ ರೈತ. ಬಸವರಾಜ ಬ್ಯಾಂಕಿನಲ್ಲಿ ಕೃಷಿ ಸಾಲ ಮಾಡಿದ್ದರು. ಅಲ್ಲದೆ, ಜೀವನ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕಾಗಿ ಕೈ ಸಾಲವನ್ನೂ ಮಾಡಿದ್ದರು. ನಾಲ್ಕೈದು ವರ್ಷಗಳಿಂದ ಕೃಷಿಯಿಂದ ಲಾಭದ ಬದಲಾಗಿ ನಷ್ಟ ಉಂಟಾಗಿತ್ತು.
ಇದೀಗ ಸಾಲ ತೀರಿಸುವ ಜತೆಗೆ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ಮಾಡುವುದು ಹೇಗೆಂಬ ಚಿಂತೆಯಿಂದ ಮನನೊಂದು ಹೊಲದಲ್ಲಿ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರೈತ ಮೃತಪಟ್ಟಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.