ರೋಣ: ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ನಿಂಗಪ್ಪ ರಾಮಪ್ಪ ಅಮಾತಿ (60) ಮೃತಪಟ್ಟ ರೈತ. ಮಂಗಳವಾರ ಸಂಜೆ ಜಮೀನಿನಿಂದ ಮರಳಿ ಮನೆಗೆ ಬರುವಾಗ ಬೆಣ್ಣೆ ಹಳ್ಳದ ಹತ್ತಿರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ರೈತನ ಸಾವಿನಿಂದಾಗಿ ಕುಟುಂಬ ಕಂಗಾಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.