house lease ‘ಸಾಲ’ದ ಮನೆ ಲೀಸ್ ಪಡೆದು ಬೀದಿಗೆ ಬಿದ್ದ ಕುಟುಂಬ

ನರಗುಂದ ಲೋಧಿಗಲ್ಲಿ ಬಡಾವಣೆಯಲ್ಲಿ ಲೀಸ್ ಪಡೆದಿರುವ ಮನೆಗೆ  house lease ಖಾಸಗಿ ಹಣಕಾಸು ಸಂಸ್ಥೆಯವರು ಬೀಗ ಹಾಕಿರುವುದು.
ನರಗುಂದ ಲೋಧಿಗಲ್ಲಿ ಬಡಾವಣೆಯಲ್ಲಿ ಲೀಸ್ ಪಡೆದಿರುವ ಮನೆಗೆ house lease ಖಾಸಗಿ ಹಣಕಾಸು ಸಂಸ್ಥೆಯವರು ಬೀಗ ಹಾಕಿರುವುದು.
Published on
ನರಗುಂದ: ಸಾಲ ಪಡೆದು ಸಕಾಲದಲ್ಲಿ ಮರಳಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಇಲ್ಲಿನ ಮನೆಯೊಂದಕ್ಕೆ ಖಾಸಗಿ ಹಣಕಾಸು ಸಂಸ್ಥೆಯ ಸಿಬ್ಬಂದಿ ಬೀಗ ಜಡಿದ್ದಾರೆ. ಸಾಲ ಪಡೆದಿರುವ ವಿಷಯ ಮುಚ್ಚಿಟ್ಟು ಮನೆಯ ಮಾಲೀಕ ಮತ್ತೊಬ್ಬರಿಗೆ ಮನೆಯನ್ನು ಲೀಸ್‌ಗೆ house lease ನೀಡಿದ್ದು, ಆ ಕುಟುಂಬವೀಗ ಅತಂತ್ರವಾಗಿದೆ.
ಸರ್ಕಾರಿ ನೌಕರ, ಇಲ್ಲಿನ ಲೋಧಿಗಲ್ಲಿ ಬಡಾವಣೆಯ ಮಾಲತಿ ಭೀಮನಗೌಡ ಪಾಟೀಲ ಎಂಬುವವರು 2021ರಲ್ಲಿ ತಮ್ಮ ಮನೆ ಮೇಲೆ ಖಾಸಗಿ ಹಣಕಾಸು ಸಂಸ್ಥೆಯಲ್ಲಿ 6 ಲಕ್ಷ ರೂ. ಸಾಲ ಪಡೆದಿದ್ದರು. ಬಳಿಕ ಈ ಮನೆಯನ್ನು ಲೀಲಾ ರಮೇಶ ಪಾಚಂಗಿ ಎಂಬುವವರಿಗೆ 2.35 ಲಕ್ಷ ರೂ.ಗೆ ಬಾಂಡ್ ಮೇಲೆ ಗುತ್ತಿಗೆ(ಲೀಸ್) ನೀಡಿದ್ದರು.
ಮನೆಯ ಮಾಲೀಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿರಲಿಲ್ಲ. ಖಾಸಗಿ ಫೈನಾನ್ಸ್ ಸಿಬ್ಬಂದಿ ನಿತ್ಯವೂ ಈ ಮನೆಗೆ ಅಲೆಯುತ್ತಿದ್ದರು. ಬಾಡಿಗೆದಾರ ಮಹಿಳೆ ಲೀಲಾ ಪಾಚಂಗಿ ಮಾಲೀಕರಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸಿದರೂ ಸಮಸ್ಯೆ ಆಲಿಸಿ, ಸ್ಪಂದಿಸುತ್ತಿರಲಿಲ್ಲ. ಇದರಿಂದ ಬೇಸತ್ತ ಫೈನಾನ್ಸ್‌ನವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಮನೆ ಜಪ್ತಿಗೆ ಆದೇಶ ತಂದಿದ್ದರು.
ಮಂಗಳವಾರ ಫೈನಾನ್ಸ್ ಸಿಬ್ಬಂದಿ ಪೊಲೀಸರೊಂದಿಗೆ ಆಗಮಿಸಿ ಲೀಲಾ ಪಾಚಂಗಿ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಹಾಕಿ, ಮನೆಗೆ ಬೀಗ ಜಡಿದಿದ್ದಾರೆ. ಮನೆ ಮಾಲೀಕ ಮಾಡಿದ ತಪ್ಪಿಗೆ ಮನೆ ಲೀಸ್ ಮೇಲೆ ಮನೆ ಪಡೆದ ಕುಟುಂಬವೊಂದು ಬೀದಿಗೆ ಬೀಳುವಂತಾಗಿದೆ.
"

2023ರಲ್ಲಿ 2.35 ಲಕ್ಷ ರೂ.ಗೆ ಲೀಸ್ ಪಡೆದಿದ್ದೇವೆ. ಈ ಬಗ್ಗೆ ಬಾಂಡ್ ಕೂಡ ಮಾಡಿಸಿದ್ದೇವೆ. ಮಾಲೀಕರು ಮನೆ ಮೇಲೆ ಸಾಲ ಪಡೆದಿರುವುದು ನಮಗೆ ಗೊತ್ತಿರಲಿಲ್ಲ. ಫೈನಾನ್ಸ್‌ನವರು ಮನೆಯಿಂದ ಹೊರಗೆ ಹಾಕಿದ್ದಾರೆ. ಗೃಹ ಬಳಕೆಯ ಎಲ್ಲ -ಸಾಮಗ್ರಿ, ಮಕ್ಕಳ ಪಠ್ಯ-ಪುಸ್ತಕಗಳು ಒಳಗೆ ಇವೆ. ಮಾಲೀಕ ಫೋನ್ ಕರೆಗೂ ಸಿಗುತ್ತಿಲ್ಲ. ಏನು ಮಾಡಬೇಕೆಂಬುದು ತೋಚುತ್ತಿಲ್ಲ

> ಲೀಲಾ ಪಾಚಂಗಿ, ಬಾಡಿಗೆದಾರ ಮಹಿಳೆ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net