WATER ತಿಂಗಳಾದರೂ ಬಾರದ ಕುಡಿಯುವ ನೀರು

WATER ಲಕ್ಷ್ಮೇಶ್ವರದ ಹಳೇ ಬಸ್ ನಿಲ್ದಾಣದ ಬಳಿ ಕುಡಿಯುವ ನೀರು ಸಂಗ್ರಹಿಸಲು ಶನಿವಾರ ಕಾದಿದ್ದ ನಿವಾಸಿಗಳು.
WATER ಲಕ್ಷ್ಮೇಶ್ವರದ ಹಳೇ ಬಸ್ ನಿಲ್ದಾಣದ ಬಳಿ ಕುಡಿಯುವ ನೀರು ಸಂಗ್ರಹಿಸಲು ಶನಿವಾರ ಕಾದಿದ್ದ ನಿವಾಸಿಗಳು.
Published on
ಲಕ್ಷ್ಮೇಶ್ವರ: ಕಳೆದ ಮೂರು ವರ್ಷಗಳಿಂದ ನೀರಿನ (WATER) ಬವಣೆ ನಿರಂತರವಾಗಿದ್ದು, ತುಂಗಭದ್ರಾ ನೀರು ಪೂರೈಕೆಯಾಗುತ್ತಿದ್ದರೂ ನಿರ್ವಹಣೆ ಅಸಮರ್ಪಕವಾಗಿದೆ.
ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿಯ ಜನರು ಶನಿವಾರ ಸಾರ್ವಜನಿಕ ನಲ್ಲಿಗಳ ಬಳಿ ನೀರಿಗಾಗಿ ಕಾದು ಕುಳಿತಿದ್ದರು. ಕಳೆದ 30 ದಿನಗಳಿಂದ ಈ ಭಾಗಕ್ಕೆ ಕುಡಿಯುವ ನೀರು ಪೂರೈಕೆೆಯಾಗಿರಲಿಲ್ಲ. ಸಾರ್ವಜನಿಕರ ನಲ್ಲಿಗಳಿಂದ ಶನಿವಾರವೂ ನೀರು ಬಾರದ್ದರಿಂದ ಜನರು ಪುರಸಭೆಗೆ ಹಿಡಿಶಾಪ ಹಾಕಿದರು. ನೀರಿನ ಯೋಜನೆ ಜಾರಿಗೆ ತರುವಲ್ಲಿ ಶ್ರಮಿಸಿದ ಅನೇಕ ಮಹನೀಯರ ಪೈಕಿ ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಅವರ ನಿವಾಸವು ಇದೇ ಮಾರ್ಗದಲ್ಲಿದೆ. ನೀರು ತಂದ ಭಗೀರಥನ ಓಣಿಯಲ್ಲಿಯೇ ಈಗ ನೀರಿನ ಬರ ಎದುರಾಗಿದೆ ಎಂದು ನಿವಾಸಿಗಳು ಗೋಳು ತೋಡಿಕೊಂಡರು. ತುಂಗಭದ್ರಾ ಕುಡಿಯುವ ನೀರು ಪೂರೈಕೆೆಯಾಗದೆ ಈಗಾಗಲೇ 30 ದಿನಗಳು ಕಳೆದಿವೆ. ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದರೆ ಯಾರು ಸ್ಪಂದಿಸುತ್ತಿಲ್ಲ. ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣದ ಬಹುತೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ನೀರಿನ ಸಮಸ್ಯೆ ಕೂಡಲೇ ಸರಿಪಡಿಸದಿದ್ದಲ್ಲಿ ಪುರಸಭೆ ಎದುರು ಖಾಲಿ ಕೊಡಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಿವಾಸಿಗಳಾದ ಉಮಾ ಮುತಗೊಂಡ, ಮುರಗಯ್ಯ ಅಕಳಂಡಸ್ವಾಮಿಮಠ, ಶಿವಯೋಗಿ ಗಡ್ಡದೇವರಮಠ, ಜ್ಯೋತಿ ಕೂಸನೂರುಮಠ, ಶೈಲಾ ಗಡ್ಡದೇವರಮಠ, ಮಲ್ಲಯ್ಯ ಗಡ್ಡದೇವರಮಠ, ಬಸನಗೌಡ ಮನ್ನಂಗಿ, ಕೊಟ್ರೇಶ ಕೆಸರಳ್ಳಿಮಠ, ಮಂಜುಳಾ ಕೂಸನೂರುಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net