grave ಸಮಾಧಿಯಿಂದ ಹೊರಬಂದ ಡಾ. ರಾಚೋಟೇಶ್ವರ ಶ್ರೀಗಳು

ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಶಿವಯೋಗ ಸಮಾಧಿಯಿಂದ grave ಹೊರಬಂದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು.
ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಶಿವಯೋಗ ಸಮಾಧಿಯಿಂದ grave ಹೊರಬಂದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು.
Published on
ಗದಗ: ಮಹದಾಯಿ ಯೋಜನೆ ಶೀಘ್ರ ಜಾರಿ, ಯೋಧರಿಗೆ ಹಾಗೂ ದೇಶಕ್ಕೆ ಅನ್ನ ನೀಡುವ ರೈತರಿಗೆ ಒಳಿತಾಗಲಿ ಎಂಬ ಪ್ರಾರ್ಥನೆಯೊಂದಿಗೆ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು 33 ದಿನಗಳಿಂದ (775 ಗಂಟೆ) ಕೈಗೊಂಡಿದ್ದ ಶಿವಯೋಗ ಸಮಾಧಿ grave ಅನುಷ್ಠಾನವು ಭಾನುವಾರ ಪೂರ್ಣಗೊಂಡಿದೆ.
ಈ ಮೂಲಕ ಅನ್ನ, ನೀರು ಹಾಗೂ ಗಾಳಿ-ಬೆಳಕಿಲ್ಲದೆ ನಡೆಸಿದ ಈ ಕಠಿಣ ಯೋಗಸಾಧನೆ ವಿಜ್ಞಾನಕ್ಕೇ ಸವಾಲೊಡ್ಡುವಂತೆ ಯಶಸ್ವಿಯಾಗಿ ನಡೆದಿದೆ.
ಜೂ.3 ರಂದು ಶ್ರೀಗಳು ಈ ಕಠಿಣ ತಪಸ್ಸನ್ನು ಕೈಗೊಂಡಿದ್ದರು. ಅದಕ್ಕಾಗಿ ಶ್ರೀಮಠದ ಕಲ್ಲಿನ ಮಂಟಪದ ಮುಖ್ಯದ್ವಾರವನ್ನು ಕಲ್ಲು ಮತ್ತು ಸಿಮೆಂಟ್‌ನಿಂದ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಭಾನುವಾರ ಅನುಷ್ಠಾನದ ಕೊನೆಯ ದಿನದಂದು ನಾಡಿನ ವಿವಿಧ ಮಠಾಧೀಶರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಮಂಟಪದ ದ್ವಾರವನ್ನು ತೆರೆದರು.
ಕಠಿಣ ಹಠಯೋಗ ಮತ್ತು ಪ್ರಾಣಾಯಾಮದ ಮೂಲಕ ಶ್ವಾಸ ನಿಯಂತ್ರಣ ಸಾಧಿಸಿದ್ದ ಶ್ರೀಗಳು, ಸಮಾಧಿಯಿಂದ ಅತ್ಯಂತ ಆರೋಗ್ಯವಂತರಾಗಿ ಹೊರಬಂದರು. ಈ ರೋಮಾಂಚನಕಾರಿ ಕ್ಷಣಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು ಹರ ಹರ ಮಹಾದೇವ, ಜೈ ರಾಚೋಟೇಶ್ವರ ಸ್ವಾಮೀಜಿ ಎಂಬ ಜಯಘೋಷಗಳೊಂದಿಗೆ ಭಕ್ತಿ ಭಾವ ಮೆರೆದರು.
ಶ್ರೀಗಳ 775 ಗಂಟೆಗಳ ತಪಸ್ಸಿನ ಸ್ಮರಣಾರ್ಥ ಮಠದ ಆವರಣದಲ್ಲಿ ಭಕ್ತರ ಸಹಕಾರದೊಂದಿಗೆ 775 ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಅವಧಿಯಲ್ಲಿ ನಿರಂತರ ಪೂಜೆ, ಪುರಾಣ ಪ್ರವಚನ, ಯಜ್ಞಯಾಗಾದಿ ವಿಧಿಗಳು ಹಾಗೂ ಅಹೋರಾತ್ರಿ ಭಜನೆಗಳು ಜರುಗಿದವು.
ಸಮಾಧಿಯಿಂದ ಹೊರಬಂದ ಶ್ರೀಗಳಿಗೆ ವಿಶೇಷ ಅಭಿಷೇಕ ನೆರವೇರಿಸಿ, ಭಕ್ತರಿಗೆ ದರ್ಶನಾಶೀರ್ವಾದ ಕಲ್ಪಿಸಲಾಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳ ತುಲಾಭಾರ ಸೇವೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕಿ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಗದಗ, ಮುಳಗುಂದ, ನೀಲಗುಂದ, ಅಣ್ಣಿಗೇರಿ, ಕುರ್ತಕೋಟಿ, ಹರ್ತಿ, ಕಲ್ಲೂರ, ಚಿಂಚಲಿ, ಸೊರಟೂರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರು, ಬೈಕ್, ಟ್ರ್ಯಾಕ್ಟರ್‌ಗಳ ಮೂಲಕ ಲಕ್ಷಾಂತರ ಭಕ್ತರು ಅಂತೂರ-ಬೆಂತೂರ ಗ್ರಾಮಕ್ಕೆ ಬಂದಿದ್ದರು.
ಮಠದ ವತಿಯಿಂದ ಭಕ್ತಾದಿಗಳಿಗೆ ಅಲ್ಲಲ್ಲಿ ಪ್ರಸಾದ ಹಾಗೂ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಧುನಿಕ ವಿಜ್ಞಾನದ ನಿಯಮಗಳನ್ನು ಮೀರಿ ಕೇವಲ ಯೋಗಶಕ್ತಿಯ ಬಲದಿಂದ ಅಂದಾಜು 10ಗಿ10 ಅಡಿಯ ಜಾಗದಲ್ಲಿ ಶ್ರೀಗಳು ಯಶಸ್ವಿಯಾಗಿ ಮುಗಿಸಿದ ಈ ಶಿವಯೋಗ ಸಮಾಧಿ ಅನುಷ್ಠಾನವು ಇಡೀ ನಾಡಿನಾದ್ಯಂತ ಭಕ್ತಿ ಮತ್ತು ಕುತೂಹಲ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net