Donation ಸರ್ಕಾರಿ ಶಾಲೆಗೆ ಚೇರ್, ಟೇಬಲ್ ಕೊಡುಗೆ

TABALE
TABALE
Published on
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯ ಉನ್ನತೀಕರಿಸಿದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಎಟಿ ಆ್ಯಂಡ್ ಟಿ ಕಂಪನಿಯವರು ಬುಧವಾರ ಶಾಲಾ ನಾಮಫಲಕ, ಗ್ರಂಥಾಲಯಕ್ಕೆ ಪುಸ್ತಕ ಹಾಗೂ ನಲಿ ಕಲಿ ಮಕ್ಕಳಿಗೆ ಚೇರ್, ಟೇಬಲ್ ಕೊಡುಗೆಯಾಗಿ (Donation ) ನೀಡಿದರು. ಸಮಾರಂಭದಲ್ಲಿ ಕಂಪನಿಯ ಪ್ರತಿನಿಧಿ ರಮೇಶ ಆನಂದ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳು ಹೊರಬರುತ್ತಾರೆ ಎನ್ನುವುದಕ್ಕೆ ಶಿಗ್ಲಿ ಶಾಲೆ ಉದಾಹರಣೆ ಎಂದು ಹೇಳಿದರು. ಯೂಥ್ ಪಾರ್ ಸೇವಾ ಸಂಸ್ಥೆಯ ಸಂತೋಷ ಮತ್ತು ರವಿಶಂಕರ ಅವರು ಮಾತನಾಡಿದರು. ಗ್ರಾಮ ಪ್ರತಿನಿಧಿ ಗಿರೀಶ ವಿರಕ್ತಮಠ ಸಂತೋಷ ತಡಹಳ, ಮುಖ್ಯಶಿಕ್ಷಕಿ ಎನ್.ವಿ. ಕುಲಕರ್ಣಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆರ್.ಡಿ. ಕಲಾಯಗರ ಹಾಜರಿದ್ದರು. ಎಸ್.ಬಿ. ಅಣ್ಣಿಗೇರಿ ಸ್ವಾಗತಿಸಿ, ದೀಪಾ ಭಸ್ಮೆ ನಿರೂಪಿಸಿದರು. ಟಿಪ್ಪನಾಯಕ ಎಲ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net