CLEAN: ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಶಿಸ್ತು ಕ್ರಮ

ಲಕ್ಷ್ಮೇಶ್ವರ ಪುರಸಭೆಯಲ್ಲಿ (CLESN) ಕರೆಯಲಾದ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರ ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಮಾತನಾಡಿದರು. ತಹಸೀಲ್ದಾರ್ ಧನಂಜಯ ಎಂ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಇದ್ದರು.
ಲಕ್ಷ್ಮೇಶ್ವರ ಪುರಸಭೆಯಲ್ಲಿ (CLESN) ಕರೆಯಲಾದ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರ ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಮಾತನಾಡಿದರು. ತಹಸೀಲ್ದಾರ್ ಧನಂಜಯ ಎಂ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಇದ್ದರು.
Published on
ಲಕ್ಷ್ಮೇಶ್ವರ: ಗಬ್ಬೆದ್ದು ನಾರುತ್ತಿರುವ ಪಟ್ಟಣದ ಅವ್ಯವಸ್ಥೆ (CLESN) ಕಂಡು ಜಿಲ್ಲಾ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ. ಅವರು ಪುರಸಭೆ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗಬ್ಬೆದ್ದು ನಾರುತ್ತಿದೆ ಲಕ್ಷ್ಮೇಶ್ವರ’ ಶೀರ್ಷಿಕೆಯಡಿ ಸೋಮವಾರ ‘ವಿಜಯವಾಣಿ’ಯಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಉಪ ವಿಭಾಗಾಧಿಕಾರಿ ಮಂಗಳವಾರ ಪುರಸಭೆಯಲ್ಲಿ ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಸಭೆ ಕರೆದರು. ‘ಏ.17ರೊಳಗೆ ಪಟ್ಟಣದ ಮುಖ್ಯ ರಸ್ತೆ, ಚರಂಡಿಗಳು ಸ್ವಚ್ಛವಾಗಬೇಕು. ಇಲ್ಲದಿದ್ದರೆ ನಾನು ಮಾತನಾಡುವುದಿಲ್ಲ, ನನ್ನ ಪೆನ್ನು ಮಾತಾಡುತ್ತದೆ’ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಅವರು, ‘ಪೌರ ಕಾರ್ಮಿಕರು ಸ್ವಚ್ಛತೆಯ ಸೇನಾನಿಗಳಾಗಿದ್ದು ತಮ್ಮ ಪಾಲಿನ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಬೇಕು. ಅಧಿಕಾರಿಗಳು ಮತ್ತು ಕಾರ್ಮಿಕರು ಪರಸ್ಪರ ಅನ್ಯೂನ್ಯತೆ, ಸಮನ್ವಯತೆ ಮತ್ತು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು.
ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನ, ದೂದನಾನಾ ದರ್ಗಾ, ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ರಾಜ್ಯಾದ್ಯಂತ ಪ್ರವಾಸಿಗರು ಬರುತ್ತಾರೆ. ಮೊದಲಿನಿಂದಲೂ ಪಟ್ಟಣ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಇದೀಗ ತಾಲೂಕು ಕೇಂದ್ರವಾಗಿ ಶೈಕ್ಷಣಿಕ, ಔದ್ಯೋಗಿಕವಾಗಿ ಹೆಸರಾಗಿದೆ. ಪಟ್ಟಣದ ಸ್ವಚ್ಛತೆ, ಅಂದ-ಚಂದ ಕಾಪಾಡುವುದು ಪುರಸಭೆಯ ಜವಾಬ್ದಾರಿ. ಹೀಗಾಗಿ ಸ್ವಚ್ಛತೆ, ಆರೋಗ್ಯಕರ ವಾತಾವರಣಕ್ಕೆ ಆದ್ಯತೆ ನೀಡಬೇಕು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮನೆ ಮನೆ ಕಸ ಸಂಗ್ರಹ ಕಾರ್ಯ ವ್ಯವಸ್ಥಿತವಾಗಿ ನಡೆಸಬೇಕು. ವ್ಯಾಪಾರಸ್ಥರು, ನಾಗರಿಕರು ರಸ್ತೆ, ಚರಂಡಿಗೆ ಕಸ ಚಲ್ಲದಂತೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೆಕು. ಖಾಲಿ ನಿವೇಶನ ಸ್ವಚ್ಛತೆಗೆ ಆಸ್ತಿ ಮಾಲೀಕರಿಗೆ ಸೂಚನೆ ನೀಡಬೇಕು ಇಲ್ಲದಿದ್ದರೆ ಪುರಸಭೆಯಿಂದ ಸ್ವಚ್ಛಗೊಳಿಸಿ ಆಸ್ತಿ ಮೇಲೆ ಭೋಜಾ ದಾಖಲಿಸಬೇಕು. ಪುರಸಭೆ ಆರೋಗ್ಯ ನಿರೀಕ್ಷಕರು ಕಾರ್ಮಿಕರಿಗೆ ಕೆಲಸ ಹಂಚಿಕೆ ಮಾಡಬೇಕು. ಜತೆಗೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು ಎಂದರು.
ಸ್ವಚ್ಛತೆಯ ಸಮಸ್ಯೆಗೆ ಪೌರ ಕಾರ್ಮಿಕರ ಕೊರತೆಯದ್ದೇ ದೊಡ್ಡ ಸಮಸ್ಯೆ ಎಂದು ಹಿರಿಯ ಆರೋಗ್ಯ ನಿರೀಕ್ಷ ಮಂಜುನಾಥ ಮುದಗಲ್ ಸಭೆಗೆ ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ, ‘ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ. ಏ.17ಕ್ಕೆ ಪಟ್ಟಣದ ವಾರ್ಡ್‌ಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇನೆ. ನಿರ್ಲಕ್ಷೃ ತೋರಿದರೆ ಶಿಕ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಹಸೀಲ್ದಾರ್ ಧನಂಜಯ ಎಂ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net