FIRE ಅಗ್ನಿ ಕುಂಡ ಹಾಯ್ದು ಭಕ್ತಿ ಸಮರ್ಪಣೆ

ಅಗ್ನಿಮಹೋತ್ಸವ ಫೋಟೋ ಶೀರ್ಷಿಕೆ:  ಮುಂಡರಗಿ ತಾಲೂಕಿನ ಸುಕ್ಷೇತ್ರ ಶಿಂಗಟಾಲೂರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಅಗ್ನಿ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಅಗ್ನಿಮಹೋತ್ಸವ ಫೋಟೋ ಶೀರ್ಷಿಕೆ: ಮುಂಡರಗಿ ತಾಲೂಕಿನ ಸುಕ್ಷೇತ್ರ ಶಿಂಗಟಾಲೂರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಅಗ್ನಿ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
Published on
ಮುಂಡರಗಿ: ತಾಲೂಕಿನ ಸುಕ್ಷೇತ್ರ ಶಿಂಗಟಾಲೂರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ದೇವಸ್ಥಾನ ಮುಂಭಾಗದ ತುಂಗಭದ್ರಾ ನದಿ ದಡದಲ್ಲಿ ಅಗ್ನಿ (FIRE) ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಗ್ಗೆ ಪಲ್ಲಕ್ಕಿಯಲ್ಲಿ ಶ್ರೀ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ಸಾವಿರಾರು ಭಕ್ತರು ಅಗ್ನಿ ಮಹೋತ್ಸವದಲ್ಲಿ ಪಾಲ್ಗೊಂಡು ಅಗ್ನಿಯನ್ನು ಹಾಯ್ದು ಭಕ್ತಿ ಸಮರ್ಪಿಸಿದರು. ಪುರುಷರು, ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಶಸ್ತ್ರಗಳನ್ನು ಕೆನ್ನೆಗಳಿಗೆ ಚುಚ್ಚಿಕೊಂಡು ಹರಕೆ ತೀರಿಸಿದರು. ಸಹಸ್ರಾರು ಭಕ್ತರು ಅಗ್ನಿ ಮಹೋತ್ಸವದಲ್ಲಿ ಪಾಲ್ಗೊಂಡು ವೀರಭದ್ರೇಶ್ವರನ ದರ್ಶನ ಪಡೆದುಕೊಂಡರು. ಕಲಕೇರಿ- ವಿರೂಪಾಪುರದ ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಉಪಾಧ್ಯಕ್ಷ ಶೇಖರಪ್ಪ ಬಾಲೇಹೊಸೂರ, ನಿರ್ದೇಶಕರಾದ ಕೊಟ್ರೇಶ ಬಳ್ಳೊಳ್ಳಿ, ಸುಭಾಸಪ್ಪ ಬಾಗೇವಾಡಿ, ಕಾಶಯ್ಯ ಬೆಂತೂರಮಠ, ಕರ್ಣಂ ಸಣ್ಣತಮ್ಮಪ್ಪ, ಸಿ.ಕೆ.ಎಂ. ಬಸವಲಿಂಗ ಸ್ವಾಮಿ, ಅಂದಪ್ಪ ಗೋಡಿ, ಪಾಲಾಕ್ಷಗೌಡ ಪಾಟೀಲ, ಬಸವರಾಜಪ್ಪ ಉಮನಾಬಾದಿ, ಕಾರ್ಯದರ್ಶಿ ಮುತ್ತಯ್ಯ ಹಿರೇಮಠ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net