PROTEST: ಶವ ಸಂಸ್ಕಾರಕ್ಕೆ ಜಾಗ ಒದಗಿಸಲು ಆಗ್ರಹ

ಶವ ಸಂಸ್ಕಾರಕ್ಕೆ ಸೂಕ್ತ ಜಾಗ ಕಲ್ಪಿಸುವಂತೆ ಆಗ್ರಹಿಸಿ ಗಜೇಂದ್ರಗಡ ತಾಲೂಕಿನ ಹಿರೇ ಅಳಗುಂಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ವೆಂಕಟೇಶ ಕುಲಕರ್ಣಿ, ಪೃಥ್ವಿರಾಜ ಚನ್ನು ಪಾಟೀಲ, ಶ್ರೀಕಾಂತ ಕಣಕಿ, ಮಲ್ಲಪ್ಪ ಶಾಂತಗೇರಿ ಇತರರಿದ್ದರು.
ಶವ ಸಂಸ್ಕಾರಕ್ಕೆ ಸೂಕ್ತ ಜಾಗ ಕಲ್ಪಿಸುವಂತೆ ಆಗ್ರಹಿಸಿ ಗಜೇಂದ್ರಗಡ ತಾಲೂಕಿನ ಹಿರೇ ಅಳಗುಂಡಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ವೆಂಕಟೇಶ ಕುಲಕರ್ಣಿ, ಪೃಥ್ವಿರಾಜ ಚನ್ನು ಪಾಟೀಲ, ಶ್ರೀಕಾಂತ ಕಣಕಿ, ಮಲ್ಲಪ್ಪ ಶಾಂತಗೇರಿ ಇತರರಿದ್ದರು.
Published on
ಗಜೇಂದ್ರಗಡ: ತಾಲೂಕಿನ ಗುಳಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಿರೇ ಅಳಗುಂಡಿ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸೂಕ್ತ ಜಾಗವಿಲ್ಲದೆ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುವಂತಾಘಿದೆ. ಹೀಗಾಗಿ ಶೀಘ್ರವೇ ಜಾಗದ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಗುಳಗುಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪದೇಪದೆ ಶವ ಸಂಸ್ಕಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಶಾಶ್ವತ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸರ್ಕಾರಿ ಜಾಗವಿದ್ದರೂ ನಿರುಪಯುಕ್ತ

ಶವ ಸಂಸ್ಕಾರಕ್ಕಾಗಿ 1999ರಲ್ಲಿ ಊರಿನ ಜನ ಗ್ರಾಮದ ಸ್ಮಶಾನಕ್ಕೆಂದು 1 ಎಕರೆ ಜಮೀನು ಖರೀದಿಸಿ ರಾಜ್ಯಪಾಲರ ಹೆಸರಿನಲ್ಲಿ ನಮೂದಿಸಿದ್ದು ಕೆಲವು ದಿನಗಳ ಕಾಲ ಅಲ್ಲಿಯೇ ಶವ ಸಂಸ್ಕಾರ ಮಾಡಲಾಗುತ್ತಿತ್ತು. ಈಗ ಹೊಲದ ಮಾಲೀಕರು ಶವ ಸಂಸ್ಕಾರ ಮಾಡಲು ಬಿಡದೆ ತಡೆ ಒಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರ ಸಮಸ್ಯೆ ಕುರಿತು ಚರ್ಚಿಸಲು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಪ್ರತಿಭಟನಾಕಾರರು ದೂರವಾಣಿ ಕರೆ ಮಾಡಿದರೂ ಅವರು ಸ್ಪಂದಿಸದ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ತಾಪಂ ಇಒ ಚಂದ್ರಶೇಖರ ಕಂದಕೂರ ಹಾಗೂ ಪಿಎಸ್‌ಐ ಪ್ರಕಾಶ ಡಿ. ಅವರು, ಶವ ಸಂಸ್ಕಾರದ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದರು.
ಪಿಡಿಒ ಹುಲ್ಲಪ್ಪ ಹಳ್ಳಿಕೇರಿ, ವೆಂಕಟೇಶ ಕುಲಕರ್ಣಿ, ಪೃಥ್ವಿರಾಜ ಚನ್ನು ಪಾಟೀಲ, ಶ್ರೀಕಾಂತ ಕಣಕಿ, ಮಲ್ಲಪ್ಪ ಶಾಂತಗೇರಿ, ಮಂಜುನಾಥ ಕುಂಕದ, ರಾಜಕುಮಾರ ಕೋಣನ್ನವರ, ಅಂದಪ್ಪ ಲಾಲಗುಂದಿ, ಮಹಾಂತೇಶ ವಾಲಿಕಾರ, ಆನಂದ ಅಸೂಟಿ, ಆನಂದ ಲಾಲಗುಂದಿ, ಸುಭಾಸ ತಳವಾರ, ಸುರೇಶ ಶಾಂತಗೇರಿ, ಬಸವರಾಜ ಲಾಲಗುಂದಿ, ಶಿವಪ್ಪ ಕುಂಕದ ಇತರರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net