ರೋಣ ಪುರಸಭೆ ಕಂದಾಯ ನಿರೀಕ್ಷಕರಿಗೆ ಲೋಕಾಯುಕ್ತ ಡಿವೈಎಸ್‌ಪಿ (MONEY) ಹೆಸರಿನಲ್ಲಿ 30 ಸಾವಿರ ಹಣಕ್ಕೆ ಬೇಡಿಕೆ ಇಡಲಾಗಿದೆ.ಕಂದಾಯ ನಿರೀಕ್ಷಕರಾದ ವಿನಾಯಕ ಅವರಿಗೆ ಮೊಬೈಲ್ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ಲೋಕಾಯುಕ್ತ ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡಿದ್ದಾನೆ. ‘ನಿಮ್ಮ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ಬಂದಿದೆ. ದೂರು ದಾಖಲಿಸದಿರಲು 30 ಸಾವಿರ ರೂ. ನೀಡಬೇಕು. ಇಲ್ಲದಿದ್ದರೆ ನಾಳೆ ಕಚೇರಿಗೆ ಬಂದು ಬಂಧಿಸುತ್ತೇವೆ‘ ಎಂದು ಬೆದರಿಕೆ ಹಾಕಿದ್ದಾನೆ.ಇದರಿಂದ ಬೆದರಿದ ಅಧಿಕಾರಿ, ‘ನನ್ನ ಬಳಿ ಈಗ 30 ಸಾವಿರ ರೂ ಇಲ್ಲ. 15 ಸಾವಿರ ಹಾಕುತ್ತೇನೆ’ ಎಂದಿದ್ದಾರೆ. 30 ನಿಮಿಷದಲ್ಲಿ ಹಣ ಹಾಕಲು ಆತ ಗಡುವು ನೀಡಿ ಕರೆ ಕಡಿತಗೊಳಿಸಿದ್ದಾನೆ. ಅರ್ಧ ಗಂಟೆ ನಂತರ ಮತ್ತೆ ಕರೆ ಮಾಡಿದ ವ್ಯಕ್ತಿ ಸಮಯ ಮುಗಿದರೂ ದುಡ್ಡು ಹಾಕಿಲ್ಲ ಏಕೆ ಎಂದು ಗದರಿದ್ದಾನೆ. ಹಣ ಹೊಂದಾಣಿಕೆಯಾಗಿಲ್ಲ. 5 ಸಾವಿರ ಅಷ್ಟೇ ಇವೆ ಎಂದಿದ್ದಾರೆ. ಓಕೆ ಈಗ ಅಷ್ಟೇ ಹಾಕಿ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾನೆ. ಇದರಿಂದ ವಿಚಿಲಿತರಾದ ಕಂದಾಯ ನಿರೀಕ್ಷಕ ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಪಿಎಸ್‌ಐ ಹಾಗೂ ಲೋಕಾಯುಕ್ತ ಎಸ್‌ಪಿ ಅವರ ಗಮನಕ್ಕೆ ತಂದಿದ್ದಾರೆ.