reservation ಉದ್ಯೋಗಕ್ಕೂ 2ಎ ಮೀಸಲಾತಿ ನೀಡಲು ಆಗ್ರಹ

ಶಿಕ್ಷಣಕ್ಕೆ ನೀಡಿದ ಮೀಸಲಾತಿಯನ್ನು reservation ಉದ್ಯೋಗಕ್ಕೂ ನೀಡಬೇಕೆಂದು ಆಗ್ರಹಿಸಿ ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಿಕ್ಷಣಕ್ಕೆ ನೀಡಿದ ಮೀಸಲಾತಿಯನ್ನು reservation ಉದ್ಯೋಗಕ್ಕೂ ನೀಡಬೇಕೆಂದು ಆಗ್ರಹಿಸಿ ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Published on
ರೋಣ: ಶಿಕ್ಷಣಕ್ಕೆ ನೀಡಿದ 2ಎ ಮೀಸಲಾತಿಯನ್ನು reservation ಉದ್ಯೋಗಕ್ಕೂ ಒದಗಿಸಬೇಕು ಎಂದು ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಕಾರ್ಯಾಧ್ಯಕ್ಷ ವೀರಣ್ಣ ಶೆಟ್ಟರ್ ಮಾತನಾಡಿ, ಬಣಜಿಗ ಸಮಾಜಕ್ಕೆ ಶೈಕ್ಷಣಿಕವಾಗಿ ನೀಡಿದ ಮೀಸಲಾತಿಯಂತೆ ಉದ್ಯೋಗಕ್ಕೂ ನೀಡಬೇಕು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ. ಅದರಂತೆ ರಾಜ್ಯ ಸರ್ಕಾರ ಉದ್ಯೋಗದಲ್ಲಿ ಮೀಸಲಾತಿಗೆ ಗೆಜೆಟ್ ಹೊರಡಿಸಿ ಸಂಪುಟದಲ್ಲಿ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.
ಸಮಾಜದ ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ನಮ್ಮ ಸಮಾಜವು ಶೈಕ್ಷಣಿಕವಾಗಿ ಅತೀ ಹಿಂದುಳಿದಿದೆ. ಸರ್ಕಾರಿ ನೇಮಕಾತಿಗಳ ಅವಕಾಶಗಳಿಂದ ವಂಚಿತವಾಗಿದೆ. ನಮ್ಮ ಸಮುದಾಯವನ್ನು 16 (4) ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ವರ್ಗಿಕರಿಸಿ ಉಚ್ಚ ನ್ಯಾಯಾಲಯದ ಆದೇಶದಂತೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಚನ್ನಮಲ್ಲಪ್ಪ ಎಸ್. ಗದಗ, ಉಪಾಧ್ಯಕ್ಷ ಸಂಗಪ್ಪ ಮೆಣಸಿನಕಾಯಿ, ಶಿವಣ್ಣ ಯಾವಗಲ್ಲ, ಪ್ರಕಾಶ ಹೊಸಮನಿ, ಶಿವಯೋಗಿ ಜಕ್ಕಲಿ, ಮುತ್ತಣ್ಣ ಕಡಗದ, ಬಸವರಾಜ ಕೊಟಗಿ, ಶೇಖಣ್ಣ ಅಳಗವಾಡಿ, ಶರಣಪ್ಪ ಜಕ್ಕಲಿ, ವೀರೇಶ ಬಳ್ಳೊಳ್ಳಿ, ಕಿರಣ ಚನ್ನವೀರಶೆಟ್ಟರ್, ಶಂಭು ಸಂಗಳದ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net