Railway line ಕುಷ್ಟಗಿ-ಘಟಪ್ರಭಾ ರೈಲು ಮಾರ್ಗಕ್ಕೆ ಹಿಂದೇಟು

ನರಗುಂದದಲ್ಲಿ ಹಮ್ಮಿಕೊಂಡಿದ್ದ ದಿ. ಜಗನ್ನಾಥರಾವ್ ಜೋಶಿ ರೈಲ್ವೆ Railway line ಹೋರಾಟ ಸಮಿತಿ ವಾರ್ಷಿಕೋತ್ಸವವನ್ನು ಚನ್ನು ನಂದಿ ಉದ್ಘಾಟಿಸಿದರು.
ನರಗುಂದದಲ್ಲಿ ಹಮ್ಮಿಕೊಂಡಿದ್ದ ದಿ. ಜಗನ್ನಾಥರಾವ್ ಜೋಶಿ ರೈಲ್ವೆ Railway line ಹೋರಾಟ ಸಮಿತಿ ವಾರ್ಷಿಕೋತ್ಸವವನ್ನು ಚನ್ನು ನಂದಿ ಉದ್ಘಾಟಿಸಿದರು.
Published on
ನರಗುಂದ: ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾವರೆಗೆ ನೂತನ Railway line ರೈಲು ಮಾರ್ಗ ಪ್ರಾರಂಭಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಖಂಡನೀಯ. ಇದು ಜನಸಂಘ ಹಾಗೂ ಆರೆಸ್ಸೆಸ್ ಕಟ್ಟಿ ಬೆಳೆಸಲು ಶ್ರಮಿಸಿದ ನರಗುಂದದ ದಿ.ಜಗನ್ನಾಥರಾವ್ ಜೋಶಿ ಅವರಿಗೆ ಬಿಜೆಪಿ ಮಾಡಿರುವ ಅತಿದೊಡ್ಡ ಅವಮಾನ ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿ.ಜಗನ್ನಾಥರಾವ್ ಜೋಶಿ ರೈಲ್ವೆ ಹೋರಾಟ ಸಮಿತಿ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾದ ಕುಷ್ಟಗಿಯಿಂದ ಘಟಪ್ರಭಾವರೆಗೆ ನೂತನ ರೈಲು ಮಾರ್ಗ ಪ್ರಾರಂಭಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳಿಗೆ ನಿರಂತರ ಮನವಿ ಮಾಡಲಾಗಿದೆ.
ಆದರೆ, ಪ್ರಸಕ್ತ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಹತ್ವದ ಯೋಜನೆ ಕುರಿತು ಕಿಂಚಿತ್ತೂ ಪ್ರಸ್ತಾಪವಾಗದಿರುವುದು ಖಂಡನೀಯ. ಜನಸಂಘ ಹಾಗೂ ಆರೆಸ್ಸೆಸ್ ಸಂಘಟನೆಯನ್ನು ಕಟ್ಟಿ ಬೆಳೆಸಲು ಅವಿರತವಾಗಿ ಶ್ರಮಿಸಿರುವ ದಿ.ಜಗನ್ನಾಥರಾವ್ ಜೋಶಿ ಅವರನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಸಂಪೂರ್ಣ ಮರೆತಿದ್ದಾರೆ. ಜೋಶಿಯವರ ಹುಟ್ಟೂರು ನರಗುಂದ ಮಾರ್ಗವಾಗಿ ನೂತನ ರೈಲ್ವೆ ಮಾರ್ಗ ಪ್ರಾರಂಭಿಸದಿರುವುದು ಅವಮಾನಕರ ಸಂಗತಿ ಎಂದು ತಿಳಿಸಿದರು.
ರೈಲ್ವೆ ಹೋರಾಟ ಸಮಿತಿ ಉಪಾಧ್ಯಕ್ಷ ರಾಘವೇಂದ್ರ ಗುಜಮಾಗಡಿ, ಜೆ.ಆರ್. ಕದಂ, ಶಿವಯೋಗಿ ಬೆಂಡಿಗೇರಿ, ಮಾರುತಿ ಭೋಸಲೆ, ನಂದೀಶ ಮಠದ, ಸಂಗಪ್ಪ ಪೂಜಾರ, ವೆಂಕಟೇಶ ಚಿತ್ರಗಾರ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net