CROP LOSS: ಬೆಳೆ ಹಾನಿ ‘ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಕೆ’

ನರಗುಂದ ತಾಲೂಕಿನ ಹದಲಿ ಮತ್ತು ಕಲಕೇರಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಬೆಳೆ ಪರಿಶೀಲಿಸಿದರು. ಚೇತನಾ ಪಾಟೀಲ, ಶ್ರೀಶೈಲ್ ತಳವಾರ, ಎಸ್.ಎಫ್. ತಹಸೀಲ್ದಾರ, ಪ್ರಶಾಂತ ದೇವರಮನಿ, ಇತರರಿದ್ದರು.
ನರಗುಂದ ತಾಲೂಕಿನ ಹದಲಿ ಮತ್ತು ಕಲಕೇರಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಬೆಳೆ ಪರಿಶೀಲಿಸಿದರು. ಚೇತನಾ ಪಾಟೀಲ, ಶ್ರೀಶೈಲ್ ತಳವಾರ, ಎಸ್.ಎಫ್. ತಹಸೀಲ್ದಾರ, ಪ್ರಶಾಂತ ದೇವರಮನಿ, ಇತರರಿದ್ದರು.
Published on
ನರಗುಂದ: ಮಳೆ ಕೊರತೆ (crop loss) ಹಿನ್ನೆಲೆಯಲ್ಲಿ ತಾಲೂಕಿನ ಹದಲಿ ಮತ್ತು ಕಲಕೇರಿ ಗ್ರಾಮದ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ‘ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಕೊರತೆಯಿಂದಾಗಿ ಬಹುತೇಕ ಬೆಳೆಗಳು ಒಣಗಲಾರಂಭಿಸಿವೆ. ಸದ್ಯದ ಬೆಳೆಗಳ ಪರಿಸ್ಥಿತಿ ಮತ್ತು ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ತಕ್ಷಣವೇ ವರದಿ ಸಲ್ಲಿಸಲಾಗುತ್ತದೆ. ಬೆಳೆಗಳ ಹಾನಿ ಬಗ್ಗೆ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಸ್ವತಃ ರೈತರೇ ಮಾಡಿಕೊಳ್ಳುವುದರ ಜತೆಗೆ ನಿಗಧಿತ ಅವಧಿಯೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು’ ಎಂದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಬೆಳೆಸಾಲ ಪಡೆದಿರುವ ರೈತರಿಗೆ ಜು.22ರ ವರೆಗೆ ಬೆಳೆವಿಮೆ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬೆಳೆಸಾಲ ಪಡೆದವರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಎಫ್‌ಐಡಿ ಹಾಗೂ ಬೆಳೆ ಸಮೀಕ್ಷೆ ಮಾಡಿಸುವುದರಿಂದ ಸರ್ಕಾರದಿಂದ ಬೆಳೆ ಪರಿಹಾರ, ಬೆಳೆ ಸಾಲ, ಬೆಳೆ ವಿಮೆ ಮತ್ತು ಬೆಂಬಲ ಬೆಲೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ರೈತರು ಎಫ್‌ಐಡಿ ಹೊಂದಿರುವುದು ಕಡ್ಡಾಯ ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಶಾಂತ ದೇವರಮನಿ, ಗೋವಿಂದರೆಡ್ಡಿ ಸಿದ್ನಾಳ, ವೀರನಗೌಡ ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net