Hanuman ಹನುಮಂತ ದೇವರಿಗೆ ತೊಟ್ಟಿಲೋತ್ಸವ

ಹನುಮ ಜಯಂತಿ Hanuman ಅಂಗವಾಗಿ ಲಕ್ಷ್ಮೇಶ್ವರದ ಹನುಮಂತ ದೇವರ ದೇವಸ್ಥಾನಗಳಲ್ಲಿ ತೊಟ್ಟಿಲೋತ್ಸವ ನೆರವೇರಿತು.
ಹನುಮ ಜಯಂತಿ Hanuman ಅಂಗವಾಗಿ ಲಕ್ಷ್ಮೇಶ್ವರದ ಹನುಮಂತ ದೇವರ ದೇವಸ್ಥಾನಗಳಲ್ಲಿ ತೊಟ್ಟಿಲೋತ್ಸವ ನೆರವೇರಿತು.
Published on
ಲಕ್ಷ್ಮೇಶ್ವರ: ಹನುಮ ಜಯಂತಿ Hanuman ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹನುಮಂತ ದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಪಟ್ಟಣದ ಪೇಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಅಲಂಕರಿಸಲಾದ ಬೆಳ್ಳಿಯ ತೊಟ್ಟಿಲಲ್ಲಿ ಹನುಮಂತ ದೇವರ ಉತ್ಸವ ಮೂರ್ತಿಯನ್ನಿರಿಸಿ ಮಹಿಳೆಯರು, ಮಕ್ಕಳು ಸೇರಿ ತೊಟ್ಟಿಲು ಪೂಜೆ ಮಾಡಿ ಜೋಗುಳ ಹಾಡಿದರು.
ಅರ್ಚಕ ಮುರಘೇಂದ್ರಸ್ವಾಮಿ ಹಿರೇಮಠ, ಮಹಿಳಾ ರುದ್ರಬಳಗದ ಸದಸ್ಯರಾದ ಪರಮೇಶ್ವರಿ, ಪ್ರಭಾ ಪುರಾಣಿಕಮಠ, ಜ್ಯೋತಿ, ಜಯಶ್ರೀ, ಆರತಿ, ವಿಜಯಲಕ್ಷ್ಮೀ, ಅಮೃತಾ ಬಾಳಿಹಳ್ಳಿಮಠ, ಪಾರ್ವತಿ ಕಳ್ಳಿಮಠ, ಶಾಂತಾ ಗುಳಗಣ್ಣವರ, ಗೌರಮ್ಮ ಮರಡೂರಮಠ, ವಿಜಯಲಕ್ಷ್ಮೀ ವಿರಕ್ತಮಠ ಅವರಿಂದ ರುದ್ರಪಠಣ, ಮಾರುತಿ ಆಂಜನೇಯ ಭಜನಾ ಸಂಘದಿಂದ ಭಜನೆ ಮತ್ತು ಕೃಷ್ಣ ಕ್ಷತ್ರಿ ಕುಟುಂಬದಿಂದ ಮಂಗಳವಾದ್ಯ ನೆರವೇರಿತು.
ಪಟ್ಟಣದ ಬಸ್ತಿಬಣ, ಹಳ್ಳದಕೇರಿ, ಹುಲಗೇರಿಬಣ, ಶಿಗ್ಲಿ ನಾಕಾದಲ್ಲಿನ ದೇವಸ್ಥಾನಗಳಲ್ಲಿ ಸೇರಿ ತಾಲೂಕಿನ ದೊಡ್ಡೂರ, ಬಾಲೆಹೊಸೂರ, ಚಿಕ್ಕಸವಣೂರ, ಸೂರಣಗಿ, ಬಟ್ಟೂರ, ಬಡ್ನಿ, ಯಲ್ಲಾಪುರ, ಶಿಗ್ಲಿ, ಅಡರಕಟ್ಟಿ, ಗೊಜನೂರ, ಯಳವತ್ತಿ, ರಾಮಗಿರಿ ಗ್ರಾಮದ ಹನಮಂತದೇವರ ದೇವಸ್ಥಾನ, ವಿಶೇಷ ಪೂಜೆ, ತೊಟ್ಟಿಲೋತ್ಸವ ನೆರವೇರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net