JAYANTHI: ಮಹನೀಯರ ಜಯಂತ್ಯುತ್ಸವಕ್ಕೆ ಸಹಕಾರ

ಮುಂಡರಗಿ ಪಟ್ಟಣದ ತಹಸೀಲ್ದಾರ್  ಕಾರ್ಯಾಲಯದಲ್ಲಿ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅವರ ಅಧ್ಯಕ್ಷತೆಯಲ್ಲಿ (JAYANTHI) ಡಾ.ಬಾಬು ಜಗಜೀವನ್ ರಾವ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಜರುಗಿತು. ವಿಶ್ವನಾಥ ಹೊಸಮನಿ, ಉದಯಕುಮಾರ ಯಲಿವಾಳ ಇತರರಿದ್ದರು.
ಮುಂಡರಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅವರ ಅಧ್ಯಕ್ಷತೆಯಲ್ಲಿ (JAYANTHI) ಡಾ.ಬಾಬು ಜಗಜೀವನ್ ರಾವ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಜರುಗಿತು. ವಿಶ್ವನಾಥ ಹೊಸಮನಿ, ಉದಯಕುಮಾರ ಯಲಿವಾಳ ಇತರರಿದ್ದರು.
Published on
ಮುಂಡರಗಿ: ಡಾ.ಬಾಬು ಜಗಜೀವನ್ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ (JAYANTHI) ಜಯಂತಿಯನ್ನು ತಾಲೂಕಿನ ಎಲ್ಲ ಇಲಾಖೆಯಲ್ಲಿ ಅಧಿಕಾರಿಗಳು ಸರ್ಕಾರದ ನಿಯಮಾನುಸಾರ ಆಚರಿಸಬೇಕು ಎಂದು ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ‘ಆಯಾ ದಿನದಂದು ಸರ್ಕಾರದ ನಿಯಮಾನುಸಾರ ಎಲ್ಲ ಇಲಾಖೆ ಹಾಗೂ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಿಸಲಾಗುತ್ತದೆ. ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡುವುದಾದರೆ ತಾಲೂಕು ಆಡಳಿತದಿಂದ ಸಹಾಯ, ಸಹಕಾರ ನೀಡಲಾಗುತ್ತದೆ ಎಂದರು.
ಸೋಮಣ್ಣ ಹೈತಾಪೂರ ಮಾತನಾಡಿ, ಸರ್ವ ಸಮಾಜದವರೂ ಸೇರಿ ಪುರಸಭೆ ಮೈದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡಿ ಎಲ್ಲರೂ ಒಗ್ಗಟ್ಟಾಗಿ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಆನಂದಗೌಡ ಪಾಟೀಲ, ನಿವೃತ್ತ ಮುಖ್ಯಶಿಕ್ಷಕ ಎಚ್.ಡಿ. ಪೂಜಾರ, ನಾಗೇಶ ಹುಬ್ಬಳ್ಳಿ, ರುದ್ರಗೌಡ ಪಾಟೀಲ, ಜ್ಯೋತಿ ಹಾನಗಲ್ಲ,ಬಸವರಾಜ ನವಲಗುಂದ, ಬಸವರಾಜ ದೇಸಾಯಿ, ರಾಘವೇಂದ್ರ ವಡ್ಡರ, ಲಕ್ಷ್ಮಣ್ಣ ತಗಡಿಮನಿ, ಬಸವಂತಪ್ಪ ಹೊಸಮನಿ, ನಾಗರಾಜ ಹೊಂಬಳಗಟ್ಟಿ, ಬಾಬಣ್ಣ ಗಟ್ಟಿ, ಚಂದ್ರು ಪೂಜಾರ, ಮಾತನಾಡಿದರು. ತಾ.ಪಂ.ಇಒ ವಿಶ್ವನಾಥ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ರಾಮಣ್ಣ ಕೋಳಿ, ದ್ಯಾಮಣ್ಣ ವಾಲಿಕಾರ, ಮೈಲಾರಪ್ಪ ಕಲಕೇರಿ, ಮರಿಯಪ್ಪ ಸಿದ್ದಣ್ಣವರ, ಗಣೇಶ ಭರಮಕ್ಕನವರ, ಶ್ರೀನಿವಾಸ ಕೊರ್ಲಗಟ್ಟಿ, ನಿಂಗರಾಜ ಹಾಲಿನವರ, ಪ್ರಭಾವತಿ ಬೆಳವಣಕಿಮಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net