ಶರಣು ಗೋಡಿ ಮಾತನಾಡಿ, ಪುರಸಭೆ ಕಲಾ ಮಹಾವಿದ್ಯಾಲಯಕ್ಕೆ ನೂರಾರು ವರ್ಷಗಳ ಶ್ರೇಷ್ಠ ಇತಿಹಾಸವಿದೆ. ಕೆಲವೇ ದಿನಗಳಲ್ಲಿ ಈ ಪದವಿ ಕಾಲೇಜು ಸರ್ಕಾರಕ್ಕೆ ಹಸ್ತಾಂತರಗೊಳ್ಳಲಿದೆ. ಇಲ್ಲಿರುವುದು ಕೇವಲ 2 ಎಕರೆ 17 ಗುಂಟೆ ಜಾಗ ಮಾತ್ರ. ಇದರಲ್ಲಿ ಕಾಲೇಜು ಕಟ್ಟಡ, ಲೈಬ್ರರಿ, ಕಾರ್ಯಾಲಯ ನಿರ್ಮಾಣಗೊಂಡಿವೆ. ಉಳಿದ ಅಲ್ಪಸ್ವಲ್ಪ ಖಾಲಿ ಜಾಗದಲ್ಲಿ ಟ್ಯಾಂಕ್ ನಿರ್ಮಾಣಗೊಂಡರೆ ಭವಿಷ್ಯದಲ್ಲಿ ಶಿಕ್ಷಣ, ಕ್ರೀಡೆ ಇತರ ಪಠ್ಯೇತರ ಚಟುವಟಿಕೆಗೆ ಜಾಗ ಇಲ್ಲದಂತಾಗುತ್ತದೆ. ಇದೇ ಕ್ಯಾಂಪಸ್‌ನಲ್ಲಿ ಕೇಂದ್ರ ಹವಾಮಾನ ಇಲಾಖೆ, ಮ್ಯಾಪಿಂಗ್ ಸೆಂಟರ್ ಆರಂಭಿಸಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಈ ಭೂಮಿಯನ್ನು ದಾನ ಮಾಡಿದ್ದಾರೆ. ಈ ಜಾಗದಲ್ಲಿ ಜಲಾಗಾರ ನಿರ್ಮಾಣವಾದಲ್ಲಿ ಭವಿಷ್ಯದಲ್ಲಿ ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಅಡ್ಡಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.