ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಫೆ. 14ರಂದು ತಾಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನ (conference) ಹಮ್ಮಿಕೊಳ್ಳಲಾಗಿದ್ದು ಇದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಗ್ರಾಮಸ್ಥರು ಉತ್ಸಾಹದಿಂದ ಪ್ರಾರಂಭಿಸಿದ್ದಾರೆ. ಸಮ್ಮೇಳನ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಸಮ್ಮೇಳನಕ್ಕೆ ಬರುವಂತೆ ಆಹ್ವಾನಿಸಿದರು. ಕಾರ್ಯಕ್ರಮಕ್ಕೆ ಸರ್ಕಾರಿಂದ ಆರ್ಥಿಕ ಸಹಾಯ ನೀಡಲು ಮನವಿ ಮಾಡಿದರು. ಜಿಲ್ಲಾಧಿಕಾರಿ ಗ್ರಾಮಸ್ಥರ ಮನವಿ ಸ್ಪಂದಿಸಿ, ಈ ಕುರಿತಂತೆ ನಿರ್ಧರಿಸುವುದಾಗಿ ತಿಳಿಸಿದರು. ಮುಖಂಡರಾದ ರಾಚನಗೌಡ ಅಜ್ಜನಗೌಡ್ರ, ಬಾಪುಗೌಡ ಭರಮಗೌಡ್ರ, ಸುರೇಶ ಭೀರಣ್ಣವರ, ಹಿರಿಯ ಪತ್ರಕರ್ತ ಜಗದೀಶ ಕುಲಕರ್ಣಿ, ಶಿವಣ್ಣ ಗಾಣಿಗೇರ, ಭೂಮರಡ್ಡಿ ಮಲ್ಲರಡ್ಡಿ ಇತರರಿದ್ದರು.