ಅ.22 ರಂದು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ

ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರೊ. ಎಸ್​. ಎಸ್​. ಪಟ್ಟಣಶೆಟ್ಟರ
Press meet
ತೋಂಟದ ಸಿದ್ಧಲಿಂಗ ಶ್ರೀಗಳು ಪುಣ್ಯಸ್ಮರಣೆ ಕುರಿತು ಎಸ್​.ಎಸ್​. ಪಟ್ಟಣಶೆಟ್ಟರ ಸುದ್ದಿಗೋಷ್ಠಿ ನಡೆಸಿದರು. ವಿನಾಯಕ ಮಾನ್ವಿ, ಕೆ.ಎಸ್​.ಚಟ್ಟಿ, ಶೇಖಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ, ಅಮರೇಶ ಅಂಗಡಿ, ಶೇಖಣ್ಣ ಅರಳಿ ಹಲವರು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಗದಗ

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಎಂಟನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅ. 22ರಂದು ಹಮ್ಮಿಕೊಳ್ಳಲಾಗಿದೆ ಎಂದು ತೊಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್​. ಎಸ್​. ಪಟ್ಟಣಶೆಟ್ಟರ ಸುದ್​ಇದಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ 2026ನೇ ಸಾಲಿನಲ್ಲಿ ವಿವಿಧ ೇತ್ರದಲ್ಲಿ ಸಾಧನೆ ತೋರಿದ 5 ಜನ ಸಾಧಕರಿಗೆ ತಲಾ ಒಂದು ಲ ರೂ. ನೀಡಲು ಸಮಿತಿ ತೀರ್ಮಾನಿಸಿದೆ. ಕಲಬುರಗಿಯ ಮಾಜಿ ಕಾಮಿರ್ಕ ಸಚಿವ ಡಾ. ಎಸ್​.ಕೆ. ಕಾಂತಾ, ಧಾರವಾಡದ ಖ್ಯಾತ ಮನೋವೈದ್ಯ ದಿವಂಗತ ಡಾ. ಆನಂದ ಪಾಂಡುರಂಗಿ, ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಶರಣ ವಿಚಾರವಾಹಿನಿಯ ಅಧ್ಯ ಐ. ಆರ್​. ಮಠಪತಿ, ಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಅವಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಗದಗ ತೋಂಟದಾರ್ಯ ವಿದ್ಯಾಪಿಠಕ್ಕೆ 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅದರ ಸುವರ್ಣ ಮಹೋತ್ಸವದ ಅಂಗವಾಗಿ ಪಾಲಾ ಬದಾಮಿ ರಸ್ತೆಯಲ್ಲಿರುವ ಮಠದ ಜಾಗೆಯಲ್ಲಿ ನಿರ್ಮಾಣಗೊಂಡಿರುವ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣ ಸೌಧವನ್ನು ಲೋಕಾರ್ಪಣೆ ಮಾಡಲಾಗುವುದು. ಸೂಕ್ತ ಜಾಗೆಯನ್ನು ಗುರುತಿಸಿ ಶ್ರೀಗಳ 10 ಅಡಿ ಎತ್ತರದ ಕಂಚಿನ ಮೂತಿರ್ಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದರು.

ಲಿಂಗಾಯತ ಪ್ರಗತಿಶೀಲ ಸಂದ ಅಧ್ಯ ಡಾ.ಉಮೇಶ ಪುರದ ಮಾತನಾಡಿ, ದಿ.22 ರಂದು ಮಠದಲ್ಲಿ ಜರುಗುವ ಕಾರ್ಯಕ್ರಮದ ಸಾನ್ನಿಧ್ಯವನ್ನು ತೋಂಟದ ಸಿದ್ಧರಾಮ ಶ್ರೀಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿತ್ತರಗಿಯ ಇಳಕಲ್​ ವಿಜಯ ಮಹಾಂತೇಶ್ವರ ಮಠದ ವಿಜಯ ಮಹಾಂತೇಶ್ವರ ಸ್ವಾಮಿಗಳು ಹಾಗೂ ನಾಡಿನ ವಿವಿಧ ಮಠಾಧೀಶರು ಸೇರಿದಂತೆ ಅನೇಕ ಮಠಗಳ ಪೂಜ್ಯರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಶರಣ ಸಾಹಿತ್ಯ ಮತ್ತು ಬಸವತತ್ವಕ್ಕೆ ಸಂಬಂಧಿಸಿದ ನಾಲ್ಕು ಗ್ರಂಥಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯ ವಿನಾಯಕ ಮಾನ್ವಿ, ಕೆ.ಎಸ್​.ಚಟ್ಟಿ, ಶೇಖಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ, ಅಮರೇಶ ಅಂಗಡಿ, ಶೇಖಣ್ಣ ಅರಳಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net