ಮತಗಟ್ಟೆ ಎದುರು ಕೈ ಕಮಲ ಕಾರ್ಯಕರ್ತರ ಜಟಾಪಟಿ

Congress BJP Fight
Published on: 

ವಿಜಯವಾಣಿ ಸುದ್ದಿಜಾಲ ಗದಗ

ಗದಗ ಮುನ್ಸಿಪಲ್​ ಕಾಲೇಜಿನ ಮತಗಟ್ಟೆ ಮುಂಭಾಗದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಕೂಗಾಟ, ತಳ್ಳಾಟ, ವಾಗ್ವಾದ ಹಾಗೂ ಪೊಲೀಸರ ಜತೆ ರಮಪಾಟ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಮಾತಿನ ಚಕಮಕಿಯಿಂದ ಕೈ ಕೈ ಮಿಲಾಯಿಸುವೆಗೂ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಜತೆ ತುಸು ಹೆಚ್ಚಾಗಿಯೇ ವಾಗ್ವಾದಕ್ಕಿಳಿದ ಬಿಜೆಪಿ ಮುಖಂಡರು ಕಾಂಗ್ರೆಸ್​ ಪಕ್ಷದ ಬೆಂಬಲಿಗರಂತೆ ವತಿರ್ಸಬೇಡಿ ಎಂದು ಕಿಡಿಕಾರಿದರು.

ನಡೆದಿದ್ದೇನು?

ಶುಕ್ರವಾರ ಮತದಾನ ಮುಗಿಯುವ ವೇಳೆ ಮತಗಟ್ಟೆ ಬಳಿ ಎಸ್​.ವಿ. ಸಂಕನೂರು, ಶಾಸಕ ಸಿ.ಸಿ. ಪಾಟೀಲ, ಅನಿಲ ಮೆಣಸಿನಕಾಯಿ, ರಾಜು ಕುರಡಗಿ ಆಗಮಿಸಿದರು. ಇದೇ ಸಂದರ್ಭದಲ್ಲಿ ಹಾಗೂ ಕಾಂಗ್ರೆಸ್​ ಅಭ್ಯಥಿರ್ ಮೋಹನ ಲಿಂಬಿಕಾಯಿ ಕೂಡ ಮತಗಟ್ಟೆ ಮುಂಭಾಗದಲ್ಲಿ ಆಗಮಿಸಿದರು. ಈ ವೇಳೆ ಕಾರ್ಯಕರ್ತರ ಪಕ್ಷದ ಮುಖಂಡರಗೆ ಜೈಕಾರ ಹಾಕಲು ಆರಂಭಿಸಿದರು. ಜೈಕಾರದ ಕೂಗು ಪರಸ್ಪರ ಕೆಸರೆಚಾಟಕ್ಕೆ ತಿರುಗಿತು. ಮತಗಟ್ಟೆ ಗೇಟ್​ ಬಂದ ಮಾಡಿದ್ದ ಪೊಲೀಸರು ಎಚ್ಚರಿಕೆ ನಡೆ ಅನುಸರಿಸಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಿಕೆಗೆ ಇಳಿದ ಕಾರ್ಯಕರ್ತರು ತಳ್ಳಾಟ ಆರಂಭಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಬಿಜೆಪಿ ಜಿಲ್ಲಾ ಉಸ್ತುವಾರಿ ಜಯತೀರ್ಥ ಕಟ್ಟಿ ಅವರನ್ನು ತಳ್ಳಿದರು. ಕಾಂಗ್ರೆಸ್​ ಕಾರ್ಯಕರ್ತರು ಸಹ ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಬಿಜೆಪಿ ಮುಖಂಡರಾದ ಶಾಸಕ ಸಿ.ಸಿ. ಪಾಟೀಲ, ಅನಿಲ ಮೆಣಸಿನಕಾಯಿ ಮತ್ತು ರಾಜು ಕುರಡಗಿ ಅವರನ್ನು ಮತಗಟ್ಟೆ ಮುಂಭಾಗದಿಂದ ಕರೆತಂದ ಪೊಲೀಸರು ಸಮಜಾಯಿಷಿ ಉತ್ತರ ನೀಡಲು ಮುಂದಾದರು. ಈ ವೇಳೆ ಆಕ್ರೋಶಗೊಂಡ ಮುಖಂಡರು ಮತಗಟ್ಟೆ ಬಳಿ ಏಕ ಪಯವಾಗಿ ನಡೆದುಕೊಳ್ಳುತ್ತಿರುವ ಪೊಲೀಸರ ಮೇಲೆ ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದರು. ಪೊಲೀಸರು ಅಲ್ಲಿಂದ ಹೊರನಡೆದರು.

ಶಾಲು ರಂಪಾಟ:

ಮುನ್ಸಿಪಲ್​ ಕಾಲೇಜಿನ ಮತಗಟ್ಟೆ ಒಳಗಡೆ ಕಾಂಗ್ರೆಸ್​ ಶಾಲು ಹಾಕಿಕೊಂಡು ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಓರ್ವ ಕಾರ್ಯಕರ್ತ ಪ್ರಚಾರ ಮಾಡುತ್ತಿದ್ದನಾಎ ಎಂಬ ವಿಷಯವೇ ಈ ಟನೆಗೆ ಮುಖ್ಯ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಕಾಂಗ್ರೆಸ್​ ಅಲ್ಲಗಳೆದಿದೆ. ಮತಗಟ್ಟೆಯಲ್ಲಿ ನಿಂತು ಅನುಕ್ರಮ ಸಂಖ್ಯೆ 1ಕ್ಕೆ ಮತ ಹಾಕಿ ಎಂದು ಕಾರ್ಯಕರ್ತ ಹೇಳುತ್ತಿದ್ದಾನೆ ಎಂದು ಪೊಲೀಂಗ್​ ಬೂತ್​ ಬಿಜೆಪಿ ಏಜೆಂಟರು ಮತಗಟ್ಟೆ ಹೊರಗಿನ ಕಾರ್ಯಕರ್ತರಿಗೆ ಸುದ್ದಿ ತಿಳಿಸಿದ್ದರು. ಹೀಗಾಗಿ ಮೊದಲೇ ಪ್ರಕ್ಷುಬ್ಧ ವಾತಾವರಣ ಸೃಷ್ಟಿ ಆಗಿತ್ತು. ಅದೇ ವೇಳೆ "ಜೈಕಾರ ಕೂಗು' ಎಂಬುದು ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಯಿತು.

ಬೆಳಗ್ಗೆ ಮತದಾನದ ವೇಳೆ ಬಿಜೆಪಿ ಕಾರ್ಯಕರ್ತ ಓರ್ವ ಬಿಜೆಪಿ ಶಾಲು ಹಾಕಿಕೊಂಡು ಮತಗಟ್ಟೆ ಪ್ರವೇಶಿಸಿದ್ದನ್ನು ಎಂದು ಕಾಂಗ್ರೆಸ್​ ಕಾರ್ಯಕರ್ತರು ಸಹ ಆರೋಪಿಸಿದ್ದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಬಿಜೆಪಿ ಕಾರ್ಯಕರ್ತನನ್ನು ಹೊರ ಎಳೆದಿದ್ದರು. ಈ ವೇಳೆಯೂ ಪೊಲೀಸರೊಂದಿ ಕಾರ್ಯಕರ್ತರು ಮಾತಿನ ಚಕಮಕಿ ನಡೆದಿತ್ತು.

ತಮಾಷೆ ಮಾಡಿದ್ದರು:

ಬಿಜೆಪಿ ಮತ್ತು ಕಾಂಗ್ರೆಸ್ಸಿಗರು ಹಲವರಲ್ಲಿ ಆತ್ಮೀಯ ಗೆಳತನ ಇದಿದ್ದರಿಂದ ಮತಗಟ್ಟೆ ಬಳಿ ಮತದಾನವೇಳೆ ಹಲವು ಮಾತಿನ ಚಚಟಾಕಿ ಮತ್ತು ತಮಾಷೆಗಳು ಜರುಗಿದ್ದವು. ಕಿತ್ತೂರು ಚೆನ್ನಮ್ಮ ಜಯಂತಿ ಇದೆ(ಪಂಚಮಸಾಲಿ). ಚೆನ್ನಮ್ಮನ ಆಶೀರ್ವಾದ ಇರಲಿ ಎಂದು ಕಾಂಗ್ರೆಸ್​ ಕಾರ್ಯಕರ್ತರು ಮತದಾರರಿಗೆ ಮತ ಬಿೆ ಕೇಳುತ್ತಿದ್ದರು. ಇದೇ ವೇಳೆ ಚೆನ್ನಮ್ಮನ ಖಡ್ಗದಿಂದ ನಿಂಬೆ(ಲಿಂಬೆ)ಎರಡು ಹೋಳಾಗಲಿ ಎಂದು ಬಿಜೆಪಿ ಕಾರ್ಯಕರ್ತರಿ ಮಾತಿನ ಚಟಾಕಿ ಹಾರಿಸುತ್ತಿದ್ದರು. ಬೆಳಗ್ಗೆ ನಗುಮುಖದಲ್ಲಿ ಕಾರ್ಯಕರ್ತರು ಸಂಜೆ ರಂಪಾಟ ಮಾಡಿಕೊಂಡರು.

ಕೋಟ್​:

ಮತಗಟ್ಟೆಗೆ ರಕ್ಷಣೆ ನೀಡಬೇಕಾದ ಪೊಲೀಸರು ಕಾಂಗ್ರೆಸ್​ ಕಾರ್ಯಕರ್ತರಂತೆ ವತಿರ್ಸಿದ್ದಾರೆ. ಏಕಪಯವಾಗಿ ಪೊಲೀಸರು ನಡೆದುಕೊಂಡಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿ ಇದ್ದು ಈ ರೀತಿ ನಡೆದುಕೊಳ್ಳುವುದು ಅಪರಾಧ.

ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net