ಮಳೆಗಾಗಿ ಶಿವ ನಾಮ ಪಠಣ

ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶಿವನಾಮ ಪಠಣ ಪೂಜಾ ಕಾರ್ಯ ಕೈಗೊಂಡಿದ್ದಾರೆ.
ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶಿವನಾಮ ಪಠಣ ಪೂಜಾ ಕಾರ್ಯ ಕೈಗೊಂಡಿದ್ದಾರೆ.
Published on
ಮುಂಡರಗಿ: ಉತ್ತಮ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮಸ್ಥರು ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ 7 ದಿನವರೆಗೆ ನಿರಂತರ  ಓಂ ನಮಃ ಶಿವಾಯ ಎಂಬ ಶಿವ ನಾಮ ಪಠಣ ಪೂಜಾ ಕಾರ್ಯವನ್ನು ಸೋಮವಾರ ಆರಂಭಿಸಿದರು.
7ಜನರು ಒಳಗೊಂಡ 6 ತಂಡಗಳನ್ನು ಮಾಡಿಕೊಂಡಿದ್ದು, ಪ್ರತಿ ಎರಡು ತಾಸಿಗೆ ಒಮ್ಮೆ ಒಂದು ತಂಡವು ಶಿವನಾಮ ಪಠಣದಲ್ಲಿ  ಪಾಲ್ಗೊಳ್ಳಲಿದೆ. 
ಕಳೆದೊಂದು ತಿಂಗಳು ಮಳೆ ಇಲ್ಲದೆ ಹಲವೆಡೆ ಬಿತ್ತನೆ ಮಾಡಿದ್ದರೆ ಇನ್ನೂ ಕೆಲವೆಡೆ ಬಿತ್ತನೆ ಮಾಡಬೇಕಾಗಿದೆ. ಮಳೆಯ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆ ಹಾನಿಯಾಗುವ ಹಂತಕ್ಕೆ ತಲುಪಿದೆ. ಹೀಗಾಗಿ ರೈತರು ಹಲವು ಪೂಜಾ ಕಾರ್ಯಗಳ ಮೂಲಕ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಸೋಮವಾರ ಮೋಡ ಕವಿದ ವಾತಾವರಣ ಕೂಡಿ ಕೆಲವೆಡೆ ಅಲ್ಪಸ್ವಲ್ಪ ಮಳೆ ಸುರಿದಿದೆ. ಉತ್ತಮ ಮಳೆ ಸುರಿದರೆ ರೈತರಿಗೆ ಅನುಕೂಲವಾಗಲಿದೆ. ರೈತರು ಉತ್ತಮ ಮಳೆ ನಿರೀಕ್ಷೆಯಲ್ಲಿದ್ದಾರೆ.
ಕಾರ ಹುಣ್ಣಿಮೆ ಕರಿ ಹರಿದ ಕಡ್ಲಿಪೇಟೆ ಹೋರಿ 
ಮುಂಡರಗಿ ಪಟ್ಟಣದ ಕೋಟೆಭಾಗದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಜಾತ್ರಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ ಹುಣ್ಣಿಮೆ ನಿಮಿತ್ತ ಸೋಮವಾರ ಸಂಜೆ ಎತ್ತುಗಳಿಂದ ಕರಿ ಹರಿಯಲಾಯಿತು.
 ಕೋಟೆಭಾಗದ ಅಗಸಿ ಬಾಗಿಲನ್ನು ತಳಿರು, ತೋರಣದಿಂದ ಸಿಂಗರಿಸಲಾಗಿತ್ತು. ಕರಿ ಹರಿಯಲು ಎತ್ತುಗಳನ್ನು ಬಿಡುವ ಸಮಯಕ್ಕೆ ಬೇವು, ತೆಂಗಿನಕಾಯಿ, ಹೂವಿನಿಂದ ಕಟ್ಟಿದ ಹುರಿಯನ್ನು ಹಿಡಿಯಲಾಗಿತ್ತು. ಕಡ್ಲಿಪೇಟೆ ರೈತ ರಾಮಣ್ಣ ಮೆದಕನಾಳ ಅವರ ಹೋರಿ ಕರಿ ಹರಿಯಿತು. ಹೋರಿಗೆ ಎರಡು ಕೊಡಂಚು ಹಾಗೂ ಎರಡು ಜೂಲಾ ನೀಡಿ ಗೌರವಿಸಲಾಯಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ಶಿವಪ್ಪ ಚಿಕ್ಕಣ್ಣನವರ, ಮಂಜುನಾಥ ಇಟಗಿ, ಯಂಕಪ್ಪ ಮಲ್ಲಾರ್ಜಿ, ಶೇಖಪ್ಪ ಬಳ್ಳಾರಿ, ಮುದಿಯಪ್ಪ ಕುಂಬಾರ, ಮಂಜಪ್ಪ ಜೋಳದ, ಯಲ್ಲಪ ಡೊಣ್ಣಿ, ದೇವಪ್ಪ ಡೊಣ್ಣಿ, ಈಶಪ್ಪ ಉಳ್ಳಾಗಡ್ಡಿ, ಅಂದಪ್ಪ ಹಂದ್ರಾಳ, ಈರಪ್ಪ ಬಳ್ಳಾರಿ, ಅರುಣ ಬಾರಕೇರ, ಶಿವಾನಂದ ದಂಡಿನ, ಶೇಖಪ್ಪ ಹಂದ್ರಾಳ, ವಾಸಪ್ಪ ದಂಡಿನ, ರಾಘು ಕುರಿ, ಉಮೇಶ ಬಳ್ಳಾರಿ, ಬಂಡೆಪ್ಪ ಜೋಳದ, ಮುದಿಯಪ್ಪ ಕುರಿ ಉಪಸ್ಥಿತರಿದ್ದರು.
ಮುಂಡರಗಿ ಪಟ್ಟಣದ ಕೋಟೆ ಭಾಗದಲ್ಲಿ ಸೋಮವಾರ ಕಡ್ಲಿಪೇಟೆಯ ರೈತ ರಾಮಣ್ಣ ಮೆದಕನಾಳ ಅವರ ಹೋರಿ ಕರಿ ಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net