Holi ಶಾಂತಿಯುತವಾಗಿ ಹೋಳಿ, ರಂಜಾನ್ ಹಬ್ಬ ಆಚರಿಸಿ

ರೋಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ holi ಹಬ್ಬದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಪ್ರಭು ಕಿರೇದಳ್ಳಿ ಮಾತನಾಡಿದರು.
ರೋಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಹೋಳಿ holi ಹಬ್ಬದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಪ್ರಭು ಕಿರೇದಳ್ಳಿ ಮಾತನಾಡಿದರು.
Published on
ರೋಣ: ಹಬ್ಬದ ನೆಪದಲ್ಲಿ ಕಾನೂನು ಮೀರುವವರ ವಿರುದ್ಧ ಕ್ರಮ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹೋಳಿ holi ಹಾಗೂ ರಂಜಾನ್ ಹಬ್ಬಗಳನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಹೇಳಿದರು.
ಹೋಳಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಹಬ್ಬಗಳು ಆಯಾ ಸಮುದಾಯಕ್ಕೆ ಸಿಮೀತವಾಗದೆ ಪ್ರತಿಯೊಬ್ಬರೂ ಸೌಹಾರ್ದದಿಂದ ಆಚರಣೆ ಮಾಡಬೇಕು. ಆಗ ಮಾತ್ರ ಹಬ್ಬಕ್ಕೆ ಅರ್ಥ ಬರುತ್ತದೆ. ನಮ್ಮಲ್ಲಿ ಹೃದಯವಂತಿಕೆ ಇರಬೇಕು. ನಮ್ಮ ಆಚರಣೆ ಬೇರೆಯವರಿಗೆ ತೊಂದರೆ ಕೊಡುವಂತೆ ಇರಬಾರದು ಎಂದರು.
ಸಿಪಿಐ ವಿಜಯಕುಮಾರ ನಾಯಕ ಮಾತನಾಡಿ, ತಾಲೂಕಿನಲ್ಲಿ ಅನಾದಿ ಕಾಲದಿಂದಲೂ ಸರ್ವ ಜನಾಂಗದವರು ಸಹೋದರರಂತೆ ಸಹಭಾಳ್ವೆ ಮಾಡುತ್ತಿದ್ದಾರೆ. ಅದೂ ಎಂದೆಂದಿಗೂ ಹೀಗೆ ಸಾಗಲಿ ಎಂದರು.
ಪಿಎಸ್‌ಐ ಪ್ರಕಾಶ ಬಣಕಾರ ಮಾತನಾಡಿ, ಹೋಳಿ ಹಬ್ಬ ಹಾಗೂ ಪಿಯುಸಿ ಪರೀಕ್ಷೆಗಳು ಒಟ್ಟಿಗೆ ಬಂದಿವೆ. ಹೋಳಿ ಹಬ್ಬಕ್ಕೆ ಹಲಗೆ ಬಾರಿಸುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ತೊಂದರೆಯಾಗುತ್ತದೆ. ಅದನ್ನು ಅರಿತು ಎಲ್ಲರೂ ಶಾಂತಿಯಿಂದ ಹಬ್ಬ ಆಚರಿಸಬೇಕು ಎಂದರು.
ವೀರಪ್ಪ ತೆಗ್ಗಿನಮನಿ ಮಾತನಾಡಿ, ಪಟ್ಟಣದಲ್ಲಿ ಹಿಂದೂ, ಮುಸ್ಲಿಮರು ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುತ್ತ ಬಂದಿದ್ದೇವೆ. ರಂಗಪಂಚಮಿಯಂದು ರಾಸಾಯನಿಕ ಬಣ್ಣ ಬಳಸದೆ ಒಣ ಬಣ್ಣ ಬಳಸುವುದು ಸೂಕ್ತ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಬಾವಾಸಾಬ್ ಬೆಟಗೇರಿ, ಬಸವರಾಜ ಜಗ್ಗಲ, ಐ.ವಿ. ಕಡಬಿನಕಟ್ಟಿ, ಮುದೇನಗುಡಿ, ಅಸ್ಲಾಂ ಕೊಪ್ಪಳ, ಸೋಮು ನಾಗರಾಜ, ಬಸೀರಮ್ಮದ ಕಟ್ಟಿಮನಿ, ನಿಯಾಜ್ ಕಂಪ್ಲಿ, ನಾಗಯ್ಯ ಗುದ್ದೇಪ್ಪನವರ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net