Hindu ಜಾತಿ, ಭೇದಭಾವ ಬಿಟ್ಟರೆ ಹಿಂದೂ ಸಮಾಜ ಶಕ್ತಿಶಾಲಿ

ಮುಂಡರಗಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ( Hindu) ಸಮ್ಮೇಳನ ಸಮಾರಂಭದಲ್ಲಿ ಅರುಣಕುಮಾರ ಜೀ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀನಿವಾಸ ಉಪ್ಪಿನಬೆಟಗೇರಿ ಇತರರಿದ್ದರು.
ಮುಂಡರಗಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ( Hindu) ಸಮ್ಮೇಳನ ಸಮಾರಂಭದಲ್ಲಿ ಅರುಣಕುಮಾರ ಜೀ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀನಿವಾಸ ಉಪ್ಪಿನಬೆಟಗೇರಿ ಇತರರಿದ್ದರು.
Published on
ಮುಂಡರಗಿ: ಜಾತಿ, ಭೇದಭಾವ ಬಿಟ್ಟು ಹಿಂದೂಗಳೆಲ್ಲ ಒಂದಾದರೆ ಹಿಂದೂ Hindu ಸಮಾಜ ಶಕ್ತಿಶಾಲಿಯಾಗಲು ಸಾಧ್ಯ. ಶತ್ರುಗಳು ಹಿಂದೂಗಳ ಸಂಖ್ಯೆ ಕಡಿಮೆ ಮಾಡುವುದಕ್ಕೆ ಹೊರಟಿದ್ದಾರೆ. ಅದಕ್ಕಾಗಿ ನಾವೆಲ್ಲ ಜಾಗೃತರಾಗಬೇಕು ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಜೀ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಕಾಲೇಜ್ ಮೈದಾನದಲ್ಲಿ ಹಿಂದೂ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣ ಮಾಡೋಣ. ಆದರೆ, ದೇಶದ ವಿರುದ್ಧ ಕೆಲಸ ಮಾಡಬಾರದು. ಹಿಂದೂಗಳು ಸೇರಿದರೆ ಉತ್ಸವ, ಆನಂದ ವೃದ್ಧಿಯಾಗುತ್ತದೆ. ಹಿಂದೂಗಳಿಂದ ದೇಶದ ಸಂಸ್ಕೃತಿ ಬೆಳೆದಿದೆ. ಭಾರತೀಯ ಸಂಸ್ಕೃತಿ ಜಗತ್ತಿಗೆ ಒಳ್ಳೆಯದನ್ನು ಮಾಡಿದೆ. ಹಿಂದೂ ಸಂಘಟನೆ, ಜಾಗೃತಿಯಿಂದ ಜಗತ್ತಿಗೆ ಒಳ್ಳೆಯದಾಗಿದೆ. ಹಿಂದೂ ಸಮಾಜ ಒಂದಾಗಿ ಸಮಾನತೆಯಿಂದ ಬಾಳಬೇಕು ಎನ್ನುವುದೇ ಸಮ್ಮೇಳನದ ಉದ್ದೇಶ ಎಂದರು.
ಆರ್‌ಎಸ್‌ಎಸ್ ದೇಶವನ್ನು ಉನ್ನತ ಸ್ಥಿತಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸಾಗಿದೆ. ಹಿಂದೂ ಜಾಗೃತಿಗಾಗಿ ಸಮ್ಮೇಳನ ಆಯೋಜಿಸಿದೆ. ಬಲಿಷ್ಠ ಶಕ್ತಿ ಗಳಿಸಲು ಹಿಂದೂಗಳು ಸಂಘಟಿತವಾಗಬೇಕು. ದುಷ್ಟ ಶಕ್ತಿಗಳು ಹಿಂದೂಗಳ ವಿರುದ್ಧ ಬರದಂತೆ ಬಲಶಾಲಿಯಾಗಬೇಕು. ಹಿಂದೂಗಳು ಯಾರ ವಿರುದ್ಧವೂ ಅಲ್ಲ. ಹಿಂದೂ ಪೋಷಣೆ, ಸಂಘಟನೆ, ಜಾಗೃತಿಗೆ ಒಂದಾಗಿ ಸಂಘಟಿತರಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿಂದೂಸ್ತಾನದಲ್ಲಿರುವ ನಾವೆಲ್ಲ ಹಿಂದೂಗಳು. ನಾವು ಒಳ್ಳೆಯವರೊಂದಿಗೆ ಸಂಪರ್ಕ ಹೊಂದಬೇಕು. ಹಿಂದೂಗಳಿಂದ ಭಾರತ ರಕ್ಷಣೆಯಾಗುತ್ತದೆ.
ಹಿಂದೂ ಸಂಸ್ಕೃತಿಯು ಬದುಕಿಸುವ ಸಂಸ್ಕೃತಿ. ಧರ್ಮ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಸ್ವಾಭಿಮಾನ, ಭಾಷಾಭಿಮಾನ, ದೇಶಾಭಿಮಾನ, ಧರ್ಮಾಭಿಮಾನ ಹೊಂದಬೇಕು. ಹಿಂದೂಗಳು ನಾವುಗಳೆಲ್ಲ ಒಂದೇ ಎನ್ನುವ ಭಾವ ಮೂಡಬೇಕು ಎಂದರು.
ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ, ಶಾಸಕ ಡಾ. ಚಂದ್ರು ಲಮಾಣಿ, ಈಶ್ವರಪ್ಪ ಹಂಚಿನಾಳ, ವೆಂಕಟೇಶ ಕುಲಕರ್ಣಿ, ಲಿಂಗರಾಜಗೌಡ ಪಾಟೀಲ, ಎಸ್.ವಿ. ಪಾಟೀಲ, ಶಿವಪ್ಪ ಚಿಕ್ಕಣ್ಣವರ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದ್ದರು.
ಎಸ್.ಆರ್. ರಿತ್ತಿ ಸ್ವಾಗತಿಸಿದರು. ದೇವಪ್ಪ ಇಟಗಿ ಮತ್ತು ಶೇಖರಗೌಡ ಪಾಟೀಲ ವಂದೇ ಮಾತರಂ ಗೀತೆ ಹಾಡಿದರು. ಮಂಜುನಾಥ ಇಟಗಿ ನಿರೂಪಿಸಿದರು. ಶ್ರೀನಿವಾಸ ಕಟ್ಟಿಮನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net