bus ಜನರ ಮೇಲೆ ಹಲ್ಲೆ ಮಾಡಿದ ಬಸ್ ಚಾಲಕ, ಕ್ಲೀನರ್ !

ಲಕ್ಷ್ಮೇಶ್ವರದ ಮುಖ್ಯ ಬಜಾರ್ ರಸ್ತೆಯಲ್ಲಿ ಉಡುಪಿ ಮೂಲದ ಖಾಸಗಿ ಬಸ್‌ನಲ್ಲಿದ್ದವರು busಸಾರ್ವಜನಿಕರೊಂದಿಗೆ ಗೂಂಡಾವರ್ತನೆ ತೋರಿದ್ದರಿಂದ ಸಾರ್ವಜನಿಕರು ಬಸ್ ತಡೆದು ಪ್ರತಿಭಟಿಸಿದರು.
ಲಕ್ಷ್ಮೇಶ್ವರದ ಮುಖ್ಯ ಬಜಾರ್ ರಸ್ತೆಯಲ್ಲಿ ಉಡುಪಿ ಮೂಲದ ಖಾಸಗಿ ಬಸ್‌ನಲ್ಲಿದ್ದವರು busಸಾರ್ವಜನಿಕರೊಂದಿಗೆ ಗೂಂಡಾವರ್ತನೆ ತೋರಿದ್ದರಿಂದ ಸಾರ್ವಜನಿಕರು ಬಸ್ ತಡೆದು ಪ್ರತಿಭಟಿಸಿದರು.
Published on
ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಉಡುಪಿ ಜಿಲ್ಲೆಯ ಕಾಪು ಗ್ರಾಮದಿಂದ ಬಂದಿದ್ದ ಖಾಸಗಿ ಬಸ್ bus ಚಾಲಕ ವಾಹನವನ್ನು ಯರ‌್ರಾಬಿರ‌್ರಿ ಚಲಾಯಿಸಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಚಾಲಕ ಮತ್ತು ಕ್ಲೀನರ್ ಸಾರ್ವಜನಿಕರ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಈ ವೇಳೆ ಸಾರ್ವಜನಿಕರು ಮತ್ತು ಬಸ್‌ನಲ್ಲಿದ್ದವರ ನಡುವೆ ಪರಸ್ಪರ ವಾಗ್ವಾದ ನಡೆಯುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.
ರಾತ್ರಿ 8 ಗಂಟೆ ಹೊತ್ತಿಗೆ ಪಟ್ಟಣದ ಸೋಮೇಶ್ವರ ಪಾದಗಟ್ಟಿಯ ಹತ್ತಿರ ಇರುವ ಕಿರಾಣಿ ಅಂಗಡಿಯ ಆದಿನಾಥ ಬರಿಗಾಲಿ ಎಂಬ ಯುವಕನಿಗೆ ಬಸ್ ತಗುಲಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಲೀನರ್ ಏಕಾಏಕಿ ಬಸ್‌ನಿಂದ ಕೆಳಗಿಳಿದು ಆದಿನಾಥ ಅವರಿಗೆ ಎದೆಗೆ ಮತ್ತು ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದಾನೆ. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಕೊಟ್ರೇಶ ಕತ್ತಿ ಮತ್ತು ಶಕ್ತಿ ಕತ್ತಿ ಸೇರಿದಂತೆ ಇನ್ನು ಹಲವರ ಕುತ್ತಿಗೆ ಪಟ್ಟಿ ಹಿಡಿದು ಅವ್ಯಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿ ಬೆದರಿಕೆ ಹಾಕಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಆದಿನಾಥ ಬರಿಗಾಲಿ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಸ್‌ಐ ನಾಗರಾಜ ಗಡದ ಅವರು ದೂರು ದಾಖಲಿಸಿಕೊಂಡು ಆರೋಪಿಗಳಾದ ಅಬ್ದುಲ್‌ರಫೀಜ್ ಮತ್ತು ಉಡುಪಿ ಜಿಲ್ಲೆಯ ಉಚ್ಚಲಾ ಗ್ರಾಮದ ಅಬ್ದುಲ್‌ರಜಾಕನನ್ನು ಬಂಧಿಸಿ ಎಸ್‌ಪಿ ಅವರ ನಿರ್ದೇಶನದಂತೆ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಯ ನಂತರ ನೂರಾರು ಯುವಕರ ಗುಂಪು ಬಸ್‌ಗೆ ಮುತ್ತಿಗೆ ಹಾಕಿ ಆರೋಪಿತರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಲ್ಲೆ ಮಾಡಿದ ವ್ಯಕ್ತಿಯನ್ನು ಕೆಳಗಿಳಿಸುವಂತೆ ಆಗ್ರಹಿಸಿದರು. ಈ ವೇಳೆ ಕೆಲ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು, ನಂತರ ಪೊಲೀಸರು ಮಧ್ಯಪ್ರವೇಶಿಸಿ ಬಸ್ ಅನ್ನು ಅಲ್ಲಿಂದ ಠಾಣೆಗೆ ಕರೆತಂದು ಆರೋಪಿತರನ್ನು ವಶಕ್ಕೆ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net