DIVOTEES ಶ್ರೀಶೈಲಕ್ಕೆ ಬೂದಿಹಾಳ ಭಕ್ತರ ಪಾದಯಾತ್ರೆ

ನರೇಗಲ್ಲ ಸಮೀಪದ ಬೂದಿಹಾಳ ಗ್ರಾಮಸ್ಥರು ಮಂಗಳವಾರ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡರು.
ನರೇಗಲ್ಲ ಸಮೀಪದ ಬೂದಿಹಾಳ ಗ್ರಾಮಸ್ಥರು ಮಂಗಳವಾರ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡರು.
Published on
ನರೇಗಲ್ಲ: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಗೆ ಸಮೀಪದ ಬೂದಿಹಾಳ ಗ್ರಾಮಸ್ಥರು ಮಂಗಳವಾರ 24ನೇ ವರ್ಷದ ಪಾದಯಾತ್ರೆ ಪ್ರಾರಂಭಿಸಿದರು. (DIVOTEES ) ಯುಗಾದಿಯಂದು ಜರುಗುವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ನೂರಾರು ಸಂಖ್ಯೆಯ ಶಿವಭಕ್ತರು ಶ್ರೀ ಕಲೇಶ್ವರ ಭಕ್ತಮಂಡಳಿಯೊಂದಿಗೆ 12 ದಿನಗಳ ಪಾದಯಾತ್ರೆ ಕೈಗೊಂಡರು.
ಬೆಳಗ್ಗೆ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಜಮಾಯಿಸಿದ ಭಕ್ತರು ವಿಶೇಷ ಪೂಜೆ ಕೈಗೊಂಡರು. ಬೂದಿಹಾಳ, ಮಾಳವಾಡ, ಕುರಹಟ್ಟಿ, ತುಪ್ಪದ ಕುರಹಟ್ಟಿ, ತೊಂಡಿಹಾಳ, ಅಬ್ಬಿಗೇರಿ, ಹಾಲಕೆರೆ, ನೀರಲಗಿ ಗ್ರಾಮ ಸೇರಿದಂತೆ ಸುತ್ತುಲಿನ ಊರುಗಳಿಂದ 100ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಗ್ರಾಮಸ್ಥ ಬಸವನಗೌಡ ಪಾಟೀಲ ಮಾತನಾಡಿ, ಸತತ 24 ವರ್ಷಗಳಿಂದ ಗ್ರಾಮದ ಕಲ್ಲಯ್ಯಜ್ಜ ಹಿರೇಮಠ ಇವರ ನೇತೃತ್ವದಲ್ಲಿ ನಾವು ಶ್ರೀಶೈಲ ಮಲ್ಲಯ್ಯನ ಪಾದಯಾತ್ರೆ ಮಾಡುತ್ತಾ ಬಂದಿದ್ದೇವೆ. ದಾರಿಯುದ್ದಕ್ಕೂ ಹಲವಾರು ದಾನಿಗಳು ನಮಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿರುತ್ತಾರೆ ಎಂದರು.
ಕಲ್ಲಯಜ್ಜ ಹಿರೇಮಠ ಮಾತನಾಡಿ, ಪ್ರತಿದಿನ 40 ರಿಂದ 50 ಕಿ.ಮೀ.ನಂತೆ 500ಕ್ಕೂ ಹೆಚ್ಚು ಕಿ.ಮೀ. ನಡೆದು ಶ್ರೀಶೈಲ ಪುಣ್ಯಕ್ಷೇತ್ರ ತಲುಪಿ ದೇವರ ದರ್ಶನ ಪಡೆಯುತ್ತೇವೆ. ಕರ್ನೂಲು ದಾಟುತ್ತಿದ್ದಂತೆ ಬೆಟ್ಟ ಗುಡ್ಡಗಳ ನಡುವೆ ನಡಿಗೆ ಕಠಿಣವಾಗುತ್ತದೆ. ಇಂಥ ದುರ್ಗಮ ದಾರಿ ತುಳಿದು ಮಲ್ಲಯ್ಯನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಆಯಾಸವೆಲ್ಲ ಕರಗಿ ಹೋಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net