blood: ರಕ್ತದಾನ `ಸಂಕಷ್ಟದಲ್ಲಿರುವವರಿಗೆ ಜೀವದಾನ

ನರಗುಂದ ಶ್ರೀಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಪ್ರಾಚಾರ್ಯ ಡಾ.ಆನಂದಕುಮಾರ ಲಾಲಸಂಗಿ ಉದ್ಘಾಟಿಸಿದರು. ಡಾ.ರೇಣುಕಾ ಕೊರವನವರ, ಡಾ.ರಾಮು ಎಂ.ಎಸ್, ಜಗದೀಶ ತಳವಾರ, ಪ್ರೊ. -Àಕೀರಬಿ ನದಾ-ï ಇತರರಿದ್ದರು.
ನರಗುಂದ ಶ್ರೀಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಅರೋಗ್ಯ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಪ್ರಾಚಾರ್ಯ ಡಾ.ಆನಂದಕುಮಾರ ಲಾಲಸಂಗಿ ಉದ್ಘಾಟಿಸಿದರು. ಡಾ.ರೇಣುಕಾ ಕೊರವನವರ, ಡಾ.ರಾಮು ಎಂ.ಎಸ್, ಜಗದೀಶ ತಳವಾರ, ಪ್ರೊ. -Àಕೀರಬಿ ನದಾ-ï ಇತರರಿದ್ದರು.
Published on
ನರಗುಂದ: ಪಟ್ಟಣದ ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್ ಕ್ರಾಸ್ ಘಟಕ, ರಾಷ್ಟಿçÃಯ ಸೇವಾ ಯೋಜನೆ, ಎನ್‌ಸಿಸಿ, ರೋವರ್ ಮತ್ತು ರೇಂರ‍್ಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಗದಗನ ಕೆ.ಎಚ್. ಪಾಟೀಲ ವೈದ್ಯಕೀಯ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬುಧವಾರ ಜರುಗಿತು.
ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಆರ್.ಸಿ. ಕೊರವನವರ ಮಾತನಾಡಿ, ರಕ್ತದಾನ ಶಿಬಿರಗಳು ಸಂಕಷ್ಟಕ್ಕೆ ಸಿಲುಕಿದವರ ಜೀವ ಉಳಿಸುವ ಅತ್ಯಮೂಲ್ಯ ಕಾರ್ಯಕ್ರಮಗಳಾಗಿವೆ. ಶಸö ಚಿಕಿತ್ಸೆ ಮತ್ತು ರೋಗಿಗಳಿಗೆ ತುರ್ತಾಗಿ ರಕ್ತ ಪೊರೈಸಲು ರಕ್ತದಾನ ಶಿಬಿರಗಳು ನೆರವಾಗುತ್ತವೆ. ೧೮ ರಿಂದ ೬೦ ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಕಾಲೇಜು ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಮಹತ್ವ ಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವುದು ಉಪಯುಕ್ತ ಎಂದರು.
ಆರೋಗ್ಯ ಇಲಾಖೆ ಆಪ್ತ ಸಮಾಲೋಚಕ ಎಸ್.ಬಿ. ಪಾಟೀಲ, ಶ್ರೀಸಿದ್ಧೇಶ್ವರ ಪ್ರಥಮ ದರ್ಜೆ ಕಾಲೇಜ್‌ನ ಪ್ರಾಚಾರ್ಯ ಡಾ.ಆನಂದಕುಮಾರ ಲಾಲಸಂಗಿ ಮಾತನಾಡಿದರು. ಡಾ. ಶ್ವೇತಾ ಪಾಟೀಲ, ಎನ್‌ಎಸ್‌ಎಸ್ ಕಾರ್ಯಕ್ರಮ ಅಽಕಾರಿ ಡಾ. ಜಗದೀಶ ತಳವಾರ, -ೆÇ್ರ. -Àಕೀರಬಿ ನದಾ-ï, ಆರೋಗ್ಯ ಇಲಾಖೆ ಆಪ್ತ ಸಮಾಲೋಚಕ ಎನ್.ಎಲ್.ಮಡಿವಾಳರ, ಎಸ್.ಬಿ. ಪಾಟೀಲ, ಇತರರಿದ್ದರು. ಡಾ.ರಾಮು ಎಂ.ಎಸ್. ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net