Banner ಬ್ಯಾನರ್‌ನಲ್ಲಿ ಹೆಸರಿಲ್ಲದ್ದಕ್ಕೆ ಭೂಮಿಪೂಜೆ ರದ್ದು

ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಆಯುಷ್ಮ್ಮಾನ್ ಆರೋಗ್ಯ ಕೇಂದ್ರ ಭೂಮಿಪೂಜೆಯಲ್ಲಿ ಬ್ಯಾನರ್‌ಲ್ಲಿ ( Banner) ಹೆಸರು ಹಾಕಿಲ್ಲ ವೀರಯ್ಯ ಮಠಪತಿ ಹಾಗೂ ಗುತ್ತಿಗೆದಾರರ ನಡುವೆ ವಾಗ್ವಾದ ನಡೆಯಿತು.
ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಆಯುಷ್ಮ್ಮಾನ್ ಆರೋಗ್ಯ ಕೇಂದ್ರ ಭೂಮಿಪೂಜೆಯಲ್ಲಿ ಬ್ಯಾನರ್‌ಲ್ಲಿ ( Banner) ಹೆಸರು ಹಾಕಿಲ್ಲ ವೀರಯ್ಯ ಮಠಪತಿ ಹಾಗೂ ಗುತ್ತಿಗೆದಾರರ ನಡುವೆ ವಾಗ್ವಾದ ನಡೆಯಿತು.
Published on
ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಮದಲ್ಲಿ ಶನಿವಾರ ನೆರವೇರಿಸಬೇಕಾಗಿದ್ದ ಆಯುಷ್ಮಾನ್ ಆರೋಗ್ಯ ಕೇಂದ್ರದ ಭೂಮಿಪೂಜೆ ಕಾರ್ಯಕ್ರಮದ ಬ್ಯಾನರ್‌ಲ್ಲಿ Banner ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಪಂ ಅಧ್ಯಕ್ಷರ ಹೆಸರು ಹಾಕಿಲ್ಲ ಎಂದು ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಕೆಎಚ್‌ಎಸ್‌ಪಿಡಿ ಇಂಜಿನಿಯರ್‌ನನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ತಡವಾಗಿ ವಿಷಯ ಗಮನಕ್ಕೆ ತಂದಿದ್ದರಿಂದ ಹಾಗೂ ತಾಲೂಕು ಗ್ಯಾರಂಟಿ ಅಧ್ಯಕ್ಷರ ಹೆಸರನ್ನು ಹಾಕಿಲ್ಲ ಎಂದು ಗ್ರಾಪಂ ಅಧ್ಯಕ್ಷ ವೀರಯ್ಯ ಮಠಪತಿ ಗುತ್ತಿಗೆದಾರರ ಜತೆ ತೀವ್ರ ವಾಗ್ವಾದ ಆರಂಭಿಸಿದರು.
ತಾಲೂಕು ಗ್ಯಾರಂಟಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ‘ಬ್ಯಾನರ್ ತೆಗೆದು ಭೂಮಿಪೂಜೆ ಮಾಡುವುದಾದರೆ ನಮ್ಮದೇನು ತಕರಾರಿಲ್ಲ. ಕಾಂಗ್ರೆಸ್‌ನವರು ಈ ಕಾರ್ಯಕ್ರಮಕ್ಕೆ ಅಡ್ಡಪಡಿಸಿಲ್ಲ. ಭೂಮಿಪೂಜೆ ಮಾಡುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಧ್ಯಾಹ್ನ 2 ಗಂಟೆಗೆ ಕಾಮಗಾರಿ ಭೂಮಿಪೂಜೆ ಮಾಡಬೇಕಾಗಿತ್ತು. ಆದರೆ, ನಾಲ್ಕು ಗಂಟೆಯಾದರೂ ಬರಲೇ ಇಲ್ಲ. ಶಾಸಕರು ಬಾರದಿರುವುದರಿಂದಲೂ ಭೂಮಿಪೂಜೆ ಕಾರ್ಯಕ್ರಮ ರದ್ದಾಯಿತು. ಪ್ರಕಾಶ ಹೋರಿ, ದ್ಯಾಮಣ್ಣ ಸಾಸಳ್ಳಿ ಸಂಜೀವರಡ್ಡಿ ವೆಂಕರಡ್ಡಿ, ಉದಯ ಕೆ. ಮಾಗಡಿ, ಫಕೀರೇಶ ನಡುವಿನಕೇರಿ, ಪವನ ಇಳಗೇರ, ಹಜರೇಸಾಬ್ ನದಾಫ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net