ಫಲಾನುಭವಿಗಳ ಸಮೀಕ್ಷೆ ಆರಂಭ

ಮುಂಡರಗಿಯಲ್ಲಿ ಬುಧವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ.ಮೋರನಾಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು. ವಿಜಯಕುಮಾರ ಬೆಣ್ಣಿ, ಹೇಮಂತಗೌಡ ಪಾಟೀಲ, ಪುಲಿಕೇಶಿಗೌಡ ಪಾಟೀಲ, ಇತರರಿದ್ದರು.
ಮುಂಡರಗಿಯಲ್ಲಿ ಬುಧವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ.ಮೋರನಾಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು. ವಿಜಯಕುಮಾರ ಬೆಣ್ಣಿ, ಹೇಮಂತಗೌಡ ಪಾಟೀಲ, ಪುಲಿಕೇಶಿಗೌಡ ಪಾಟೀಲ, ಇತರರಿದ್ದರು.
Published on
ಮುಂಡರಗಿ: ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಬುಧವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿತು.
ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಲಾಭ ಪಡೆಯುತ್ತಿದ್ದ ಮೃತ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದು, ಜು.1ರಿಂದ ಸಮೀಕ್ಷೆ ಆರಂಭವಾಗಿದೆ. ಸಾರ್ವಜನಿಕರು ಸಮೀಕ್ಷೆಗೆ ಬರುವ ಅಧಿಕಾರಿಗಳಿಗೆ ಅಗತ್ಯ ದಾಖಲೆ ಮತ್ತು ಮಾಹಿತಿ ಒದಗಿಸಬೇಕು ಡಿ.ಡಿ.ಮೋರನಾಳ ತಿಳಿಸಿದರು.
ರಾಜ್ಯಾದ್ಯಂತ ಎಸ್‌ಐಆರ್‌ಆರಂಭವಾಗಿದ್ದು, ಮತದಾರರ ಚೀಟಿಯನ್ನು ಹೊಂದಿದವರಿಗೆ ಮಾತ್ರ ಯೋಜನೆಗಳು ದೊರೆಯಲಿವೆ. ಆದ್ದರಿಂದ ಎಲ್ಲ ನಾಗರಿಕರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರನ್ನು ನಮೂದಿಸಬೇಕು. ಮತದಾರರ ಚೀಟಿ ಇಲ್ಲದವರನ್ನು ಗ್ಯಾರಂಟಿ ಯೋಜನೆಯಿಂದ ಹೊರಗಿಡಲಾಗುತ್ತದೆ ಎಂದು ಎಚ್ಚರಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ಗದಗ ಜಿಲ್ಲಾ ಉಪಾಧ್ಯಕ್ಷ ಹೇಮಂತಗೌಡ ಪಾಟೀಲ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಅನರ್ಹ ಮತ್ತು ಮೃತ ಫಲಾನುಭವಿಗಳ ಯಾದಿಯನ್ನು ತಯಾರಿಸಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಲ್ಲಿಸಬೇಕು.ಜಿಲ್ಲಾ ಹಂತದಲ್ಲಿ ಯಾದಿಯನ್ನು ಮರು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮನೆ-ಮನೆಗೆ ತೆರಳಿ ಕೆಲವರು ಪಡಿತರ ಅಕ್ಕಿ ಸಂಗ್ರಹಿಸಲು ಮುಂದಾಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಾಧ್ಯಕ್ಷರು, ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಆಹಾರ ನಿರೀಕ್ಷಕ, ಯುವನಿಧಿ, ಸ್ತ್ರೀಶಕ್ತಿ ಯೋಜನೆ, ಸಿಡಿಪಿಒ, ಇಲಾಖೆ ಅಧಿಕಾರಿಗಳು ಪ್ರಗತಿ ಹಾಗೂ ಮಾಹಿತಿ ಒದಗಿಸಿದರು.
ತಾಪಂ ಇಒ ವಿಜಯಕುಮಾರ ಬೆಣ್ಣಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಪುಲಿಕೇಶಿಗೌಡ ಪಾಟೀಲ, ತಾಲೂಕು ಸಮಿತಿ ಸದಸ್ಯರಾದ ರಾಮಣ್ಣ ಮೇಗಲಮನಿ, ಭುವನೇಶ್ವರಿ ಕಲ್ಲುಕುಟಿಗರ, ವಿಶ್ವನಾಥ ಪಾಟೀಲ, ಕಾಶಪ್ಪ ಹೊನ್ನೂರ, ನಾಗರಾಜ ಹಳ್ಳಿಕೇರಿ, ಸುರೇಶ ಮಾಳಗಿಮನಿ, ಗಣೇಶ ರಾಠೋಡ, ಉಮೇಶ ಕಲಾಲ, ಜಲಾಲಸಾಬ ವಡ್ಡಟ್ಟಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net