silver jubilee: ‘ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ’

‘ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ’ದ (silver jubilee) ಅಂಗವಾಗಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಗುರುಸಿದ್ಧ ಸ್ವಾಮೀಜಿ, ಸುಜ್ಞಾನದೇವ ಶಿವಾಚಾರ್ಯರು, ತಿಮ್ಮರೆಡ್ಡಿ ಮರಡ್ಡಿ, ರಮೇಶ ನಿರ್ವಾಣಶೆಟ್ಟರ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಸಿದ್ರಾಮಪ್ಪ ಮೊರಬದ, ಮಹೇಶ ಬಡ್ಡಿ ಇತರರಿದ್ದರು.
‘ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ’ದ (silver jubilee) ಅಂಗವಾಗಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಗುರುಸಿದ್ಧ ಸ್ವಾಮೀಜಿ, ಸುಜ್ಞಾನದೇವ ಶಿವಾಚಾರ್ಯರು, ತಿಮ್ಮರೆಡ್ಡಿ ಮರಡ್ಡಿ, ರಮೇಶ ನಿರ್ವಾಣಶೆಟ್ಟರ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಸಿದ್ರಾಮಪ್ಪ ಮೊರಬದ, ಮಹೇಶ ಬಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ. 21ರಂದು ಪುರಾಣ ಮಂಗಲೋತ್ಸವ
  • ನಾರಾಯಣಪುರದ ಬಸವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ
  • ಬಸವ ಪುರಾಣ ಗ್ರಂಥ, ಬಸವರಾಜ ಶ್ರೀಗಳ ಮೆರವಣಿಗೆ
  • ನ. 22ರಂದು ಮಂಟಪ ಪೂಜಾಕಾರ್ಯ, 25 ಶ್ರೀಗಳು ಭಾಗಿ
ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮಿಗಳ (silver jubilee) 25ನೇ ವರ್ಷದ ಪಟ್ಟಾಧಿಕಾರದ ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ ಸಮಾರಂಭ ನ. 21ರಂದು ಶ್ರೀಮಠದಲ್ಲಿ ಜರುಗಲಿದೆ ಎಂದು ಶ್ರೀಮಠದ ಭಕ್ತ ತಿಮ್ಮರೆಡ್ಡಿ ಮರಡ್ಡಿ ತಿಳಿಸಿದರು.
ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಸೆ. 23ರಿಂದ ಸತತ 60 ದಿನಗಳ ಕಾಲ ಶ್ರೀಮಠದಲ್ಲಿ ಬಸವ ಪುರಾಣ ಕಾರ್ಯಕ್ರಮ ಜರುಗಿದ್ದು ನ. 21ರಂದು ಪುರಾಣ ಮಂಗಲೋತ್ಸವ ನಡೆಯಲಿದೆ. 
ಅಂದು ನಾರಾಯಣಪುರದ ಬಸವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಮತ್ತು ಸಕಲ ವಾದ್ಯಗಳೊಂದಿಗೆ ಬಸವ ಪುರಾಣ ಗ್ರಂಥ ಹಾಗೂ ಬಸವರಾಜ ಸ್ವಾಮಿಗಳ ಭವ್ಯ ಮೆರವಣಿಗೆ ನಡೆಯಲಿದೆ. ಸುತ್ತಲಿನ 50 ಗ್ರಾಮಗಳ ಸುಮಾರು 15 ಸಾವಿರ ಭಕ್ತರು ಸೇರುವ ನಿರೀಕ್ಷೆಯಿದೆ ಎಂದರು.
ರಾಮಲಿಂಗೇಶ್ವರ ದಾಸೋಹ ಮಠದಲ್ಲಿ ಅಗಡಿ ಗ್ರಾಮದ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮಿಗಳು ಹಾಗೂ ಬನ್ನಿಕೊಪ್ಪ ಬ್ರಹನ್ಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು, ‘ಬೆಳ್ಳಟ್ಟಿ ಬೆಳಕಿನ ಬೆಳ್ಳಿ ಮಹೋತ್ಸವ- 2025’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ನ. 22ರಂದು ಬೆಳಗ್ಗೆ 8ಕ್ಕೆ ಮಂಟಪ ಪೂಜಾಕಾರ್ಯ ನೆರವೇರಲಿದೆ. ನಾಡಿನ 25 ಪೂಜ್ಯರು ಪಾಲ್ಗೊಳ್ಳುವರು.
ಸಂಜೆ ಫಕೀರ ಸಿದ್ಧರಾಮ ಶ್ರೀಗಳು, ನಾಗಭೂಷಣ ಸ್ವಾಮೀಜಿ, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಪ್ರಭುಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ಪುರಾಣ ಮಂಗಲೋತ್ಸವ ಸಮಾರೋಪ ಮತ್ತು ಕರ್ಪೂರದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದರು.
ಸುಜ್ಞಾನದೇವ ಶಿವಾಚಾರ್ಯರು ಮಾತನಾಡಿ, ‘ಬಸವರಾಜ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರದ ಮತ್ತು 50ನೇ ಜನ್ಮ ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀಗಳಿಗೆ ಭಕ್ತರಿಂದ ತುಲಾಭಾರ ಮಾಡಲಾಗುತ್ತದೆ.
ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಸಿದ್ರಾಮಪ್ಪ ಮೊರಬದ, ಮಹೇಶ ಬಡ್ಡಿ, ರಾಜೇಂದ್ರ ಹಲಗಲಿ, ಸುರೇಶ ಬಸವರಡ್ಡಿ.
ರಾಘವೇಂದ್ರ ಇಚ್ಚಂಗಿ, ವೀರನಗೌಡ ಪಾಟೀಲ, ಸುರೇಶ ಬ್ಯಾಲಹುಣಸಿ, ವಿರೂಪಾಕ್ಷ ನಂದೆಣ್ಣವರ, ಶೇಖರಪ್ಪ ಮಹಾಜನಶೆಟ್ಟರ, ಕೊಟ್ರೇಶ ಸಜ್ಜನ, ದ್ಯಾಮಣ್ಣ ಮಾಳಮ್ಮನವರ, ಜಗನ್ನಾಥಯ್ಯ ಹಿರೇಮಠ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net