

ಪ್ರಮುಖ ಮುಖ್ಯಾಂಶಗಳು
ಗಣರಾಜ್ಯೋತ್ಸವ ಸಿದ್ಧತೆ ಪರಿಶೀಲಿಸಿ ಮನೆಗೆ ಬಂದು ಊಟ ಮಾಡಲು ಕುಳಿತಿದ್ದೆ. ಈ ವೇಳೆ ಇಬ್ಬರು ಮದ್ಯ ಸೇವಿಸಿ ನನ್ನ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ನನ್ನ ಮೇಲೆ ಹಲ್ಲೆ ಮಾಡಿದರು. ಕುತ್ತಿಗೆ ಹಿಡಿದರು. ಈ ವೇಳೆ ಅವರನ್ನು ದೂರ ತಳ್ಳಿ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದೆ. ಅವರ ಮೇಲೆ ದೂರು ದಾಖಲಿಸಿದ್ದೇನೆ. ದೂರು ಹಿಂಪಡೆಯುವಂತೆ ಕೆಲವು ಸಂಘಟನೆಗಳವರು ಒತ್ತಡ ಹಾಕುತ್ತಿದ್ದಾರೆ. ಆದರೆ, ರೋಣದಲ್ಲಿ ಒಬ್ಬ ತಾಲೂಕು ದಂಡಾಧಿಕಾರಿಗೆ ಹೀಗಾದರೆ, ಕೆಳ ಹಂತದ ಅಧಿಕಾರಿಗಳ ಗತಿ ಏನು ಎಂಬಂತಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ದೂರು ಹಿಂಪಡೆಯುವುದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ.
ರೋಣ ತಹಸೀಲ್ದಾರ್ ನಾಗರಾಜ ಕೆ. ಅವರ ಮೇಲೆ ಹಲ್ಲೆಯಾಗಿದೆ. ಅವರು ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಇಬ್ಬರನ್ನು ಬಂಧಿಸಿದ್ದೇವೆ. ಮುಂದೆ ಕಾನೂನು ಕ್ರಮವಾಗಲಿದೆ.