ARREST ಅಪ್ರಾಪ್ರೆಯರ ಮದುವೆಯಾದವರ ಬಂಧನ

ARREST ಬಂಧನ
ARREST ಬಂಧನ
Published on
ನರಗುಂದ: ಅಪ್ರಾಪ್ರೆಯರನ್ನು ಮದುವೆಯಾದ ಇಬ್ಬರನ್ನು ಬಂಧಿಸಿ (ARREST) ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಬೆಳ್ಳೇರಿ ಗ್ರಾಮದ ಪುಂಡಲೀಕ ಬಸಪ್ಪ ಮೇಟಿ (30) ಹಾಗೂ ಬೆನಕನಕೊಪ್ಪ ಗ್ರಾಮದ ಪ್ರಶಾಂತ ಸಣ್ಣಫಕೀರಪ್ಪ ಮರ್ಚಕ್ಕನವರ (26) ಬಂಧಿತರು.
ಬೆಳ್ಳೇರಿಯ ಪುಂಡಲೀಕ ಮೇಟಿ 2024ರಲ್ಲಿ ಸವದತ್ತಿ ತಾಲೂಕಿನ ಅಪ್ರಾಪ್ತೆಯನ್ನು ಮದುವೆ ಆಗಿದ್ದ. ಈಗ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬೆನಕನಕೊಪ್ಪದ ಪ್ರಶಾಂತ ರಾಮದುರ್ಗ ತಾಲೂಕಿನ ಅಪ್ರಾಪ್ತೆಯನ್ನು ಕಳೆದ ವರ್ಷ ಮದುವೆಯಾಗಿದ್ದ. ಈ ಕುರಿತು ಗದಗ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಗೆ ನೀಡಿದ ಲಿಖಿತ ದೂರಿನ ಮೇರೆಗೆ ನರಗುಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪರಿಮಳ ಹೂಗಾರ, ಸಿಪಿಐ ಮಂಜುನಾಥ ನಡುವಿನಮನಿ ಹಾಗೂ ಪೊಲೀಸ್ ಸಿಬ್ಬಂದಿ ಎರಡು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವರಿಬ್ಬರೂ ಬಾಲಕಿಯರನ್ನು ಮದುವೆಯಾಗಿರುವ ಬಗ್ಗೆ ದಾಖಲೆಗಳ ಸಹಿತ ಖಚಿತವಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಬಾಲಕಿಯರಿಗೆ ಜಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿ ಬಾಲ ಮಂದಿರದ ವಶಕ್ಕೆ ಒಪ್ಪಿಸಲಾಗಿದೆ. ಮದುವೆಗೆ ಸಹಕರಿಸಿದ ಎರಡೂ ಕಡೆಯ ಪಾಲಕರನ್ನು ಬಂಧಿಸಲಾಗುವುದು ಎಂದು ಸಿಪಿಐ ಮಂಜುನಾಥ ನಡುವಿನಮನಿ ತಿಳಿಸಿದ್ದಾರೆ!.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net