rail line ಕುಷ್ಟಗಿ-ಘಟಪ್ರಭಾ ರೈಲು ಮಾರ್ಗಕ್ಕೆ ಮನವಿ

ಕುಷ್ಟಗಿ- ಘಟಪ್ರಭಾ ರೈಲು ಮಾರ್ಗ rail line ರಚನೆಗಾಗಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ನೀಡಿ ಚರ್ಚೆ ನಡೆಸಿದರು. ಸಚಿವ ಪ್ರಲ್ಹಾದ ಜೋಶಿ, ಸಂಸದ ರಮೇಶ ಜಿಗಜಿಣಗಿ ಇದ್ದರು.
ಕುಷ್ಟಗಿ- ಘಟಪ್ರಭಾ ರೈಲು ಮಾರ್ಗ rail line ರಚನೆಗಾಗಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ನೀಡಿ ಚರ್ಚೆ ನಡೆಸಿದರು. ಸಚಿವ ಪ್ರಲ್ಹಾದ ಜೋಶಿ, ಸಂಸದ ರಮೇಶ ಜಿಗಜಿಣಗಿ ಇದ್ದರು.
Published on
ನರಗುಂದ: ಬಹುದಿನಗಳಿಂದ ಬೇಡಿಕೆಯಲ್ಲಿರುವ ಕುಷ್ಟಗಿ-ಘಟಪ್ರಭಾ ರೈಲು ಮಾರ್ಗ rail line ರಚನೆಗಾಗಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಕುಷ್ಟಗಿ- ಘಟಪ್ರಭಾ ಮಾರ್ಗವಾಗಿ ರೈಲು ಮಾರ್ಗಕ್ಕೆ ಹೆಚ್ಚಿನ ಪ್ರಾಮುಖ್ಯ ಇದೆ. ಅನೇಕ ವರ್ಷಗಳಿಂದ ಸ್ಥಳೀಯರಿಂದ ರೈಲು ಮಾರ್ಗಕ್ಕಾಗಿ ಹೆಚ್ಚಿನ ಒತ್ತಡವಿದೆ. ಈ ಮಾರ್ಗ ರಚನೆಗೊಂಡಲ್ಲಿ ಅನೇಕ ಪಟ್ಟಣಗಳ ಮಾರ್ಗವಾಗಿ ಐತಿಹಾಸಿಕ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡ ಭಾಗದಿಂದ ಪ್ರಯಾಣಿಕರು ಸಂಚರಿಸಲು ಯೋಗ್ಯವಾಗಲಿದೆ.
ರೈಲು ಮಾರ್ಗ ಸಮೀಕ್ಷೆ ಹಾಗೂ ಮಂಜೂರಾತಿಗಾಗಿ ಬೇಡಿಕೆ ಇದೆ. ಶೀಘ್ರದಲ್ಲೇ ಈ ಮಾರ್ಗದ ಸಮೀಕ್ಷೆ ನಡೆಸಲು ಸಂಸದ ಗದ್ದಿಗೌಡ್ರ ಸಚಿವರಲ್ಲಿ ಆಗ್ರಹಿಸಿದರು.
ರೈಲ್ವೆ ಮಾರ್ಗ ರಚನೆಗೆ ಒತ್ತಾಯಿಸಿ ಈಗಾಗಲೇ ಜಂಟಿ ಹೋರಾಟ ಸಮಿತಿಯಿಂದ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್‌ಗೆ ಮನವಿ ನೀಡಲಾಗಿದೆ. ತಾಂತ್ರಿಕ ಸಮೀಕ್ಷೆಯನ್ನು ನಡೆಸಲು ಮನವಿಯಲ್ಲಿ ಕೋರಲಾಗಿದೆ.
ರೈಲು ಮಾರ್ಗವು ಕುಷ್ಟಗಿ, ಗಜೇಂದ್ರಗಡ, ರೋಣ, ನರಗುಂದ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಗೋಕಾಕ, ಘಟಪ್ರಭಾ ಮುಖಾಂತರ ಸಂಚರಿಸಲು ಅತೀ ಪ್ರಾಮುಖ್ಯವಾಗಿದೆ ಎಂದರು.
ಕುಷ್ಟಗಿ ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ, ತೆಲಂಗಾಣ ಸಂಪರ್ಕಿಸುವ ಮಹತ್ವದ ಜಂಕ್ಷನ್ ಆಗುವ ಸಾಧ್ಯತೆ ಇದೆ. ಈ ವ್ಯಾಪ್ತಿಯಲ್ಲಿ ಸಾಗುವ ರೈಲ್ವೆ ಎಲ್ಲ ಪ್ರದೇಶದ ವ್ಯಾಪಾರ, ವಹಿವಾಟು, ಕೃಷಿ, ಕೈಗಾರಿಕೆ ಮತ್ತು ಚಲನೆಶೀಲತೆಗೆ ಪ್ರಾಮುಖ್ಯ ನೀಡುವುದಾಗಿದೆ.
ಇದರ ಜತೆಗೆ ಐತಿಹಾಸಿಕ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡಕ್ಕೆ ಅನೇಕ ಭಕ್ತಾದಿಗಳು ವರ್ಷವಿಡಿ ದೇವಿ ದರ್ಶನಕ್ಕೆ ಆಗಮಿಸುತ್ತಾರೆ ಎಂದು ಮನವರಿಕೆ ಮಾಡಿದರು.
ನೂತನ ರೈಲು ಮಾರ್ಗಕ್ಕಾಗಿ ತಕ್ಷಣ ಅನುಮೋದನೆ, ಮುಂಬರುವ ರೈಲ್ವೆ ಕಾಮಗಾರಿ ಯೋಜನೆ ಮಂಜೂರು ಮಾಡುವುದು ಇಂತಹ ಜನಾಭಿಪ್ರಾಯದ ಮನವಿಗೆ ಸಕಾರಾತ್ಮಕ ಪರಿಗಣನೆ ಪಡೆಯುವ ಮಹತ್ವದ ಸಮೀಕ್ಷೆ ಆಗಿದ್ದರಿಂದ ಈ ಯೋಜನೆ ಮಹತ್ವ ಪಡೆದುಕೊಂಡಿದೆ ಎಂದು ಗದ್ದಿಗೌಡ್ರ ಸಚಿವರಲ್ಲಿ ವಿನಂತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net