Fertilizer ರಸಗೊಬ್ಬರ ಸಮರ್ಪಕ ಪೂರೈಕೆಗೆ ಮನವಿ

ರಸಗೊಬ್ಬರ ಪೂರೈಕೆ
ರಸಗೊಬ್ಬರ ಪೂರೈಕೆ
Published on
ಮುಂಡರಗಿ: ಯೂರಿಯಾ ರಸಗೊಬ್ಬರವನ್ನು ರೈತರಿಗೆ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಕಿಸಾನ್ ಜಾಗೃತಿ Fertilizer () ಸಂಘದಿಂದ ಸೋಮವಾರ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕಾಧ್ಯಕ್ಷ ವಿ.ಎಸ್. ಗಟ್ಟಿ ಮಾತನಾಡಿ, ಸರ್ಕಾರ ರಸಗೊಬ್ಬರವನ್ನು ಎಫ್‌ಐಡಿ ಮೂಲಕ ರೈತರ ತೆಗೆದುಕೊಳ್ಳಬೇಕು ಎಂದು ಆದೇಶ ಮಾಡಿದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತದೆ. ಕೆಲ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಎಫ್‌ಐಡಿ ಮೂಲಕ ಪ್ರತಿ ಎಕರೆಗೆ ಒಂದು ಚೀಲ ಯೂರಿಯಾ ಎಂಬುದನ್ನು ರದ್ದುಪಡಿಸಬೇಕು. ಖರೀದಿ ಮಾಡುವ ರಸಗೊಬ್ಬರ ಜತೆ ಅವಶ್ಯಕತೆ ಇಲ್ಲದ ಲಿಂಕ್ ಗೊಬ್ಬರ ತೆಗೆದುಕೊಳ್ಳಬೇಕೆಂಬುದನ್ನು ನಿಲ್ಲಿಸಬೇಕು. ಲಿಂಕ್ ಗೊಬ್ಬರ ಖರೀದಿ ಮಾಡುವಂತೆ ಒತ್ತಾಯ ಮಾಡುವ ವಿತರಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಖರೀದಿಸುವ ರೈತರಿಗೆ ಎಫ್‌ಐಡಿ ರದ್ದು ಪಡಿಸಬೇಕು. ಅದರಿಂದ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು. ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಭಂಡಾರಿ, ಅಂಬವ್ವ ಕಟ್ಟಿಮನಿ, ತಿಮ್ಮಪ್ಪ ಭಜಮ್ಮನವರ, ಬಿ.ಎಸ್. ಕಲಕೇರಿ, ಸತ್ಯಪ್ಪ ಕವಲೂರ, ರಾಮಸ್ವಾಮಿ ನಿಟ್ಟಾಲಿ, ಕಾಶೀಂಸಾಬ್ ಸೈದರ್, ಫಕ್ಕೀರಪ್ಪ ವಡ್ಡಟ್ಟಿ, ಮಲ್ಲಪ್ಪ ಜಾಲವಾಡಗಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net