ಸರ್ಕಾರದಿಂದ ದಲಿತ ವಿರೋಧಿ ನೀತಿ government

ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಅಮಾನತಿಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ವಿವಿಧ ಸಂಘಟನೆಗಳು  ಧರಣಿ ಸತ್ಯಾಗ್ರಹ ನಡೆಸಿದವು.
ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಅಮಾನತಿಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ವಿವಿಧ ಸಂಘಟನೆಗಳು ಧರಣಿ ಸತ್ಯಾಗ್ರಹ ನಡೆಸಿದವು.
Published on
ಶಿರಹಟ್ಟಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ government ಅಸ್ತಿತ್ವಕ್ಕೆ ಬಂದ ನಂತರ ಹಿಂದುಳಿದವರು, ದಲಿತರು, ಹಿಂದುಗಳಿಗೆ ಸರ್ಕಾರಿ ಅಧಿಕಾರಿಗಳಿಂದ ಕಿರುಕುಳ ಹೆಚ್ಚಳವಾಗಿದೆ ಎಂದು ದಲಿತ ಮಿತ್ರ ಮಂಡಳಿಯ ಜಿಲ್ಲಾ ಸಂಚಾಲಕ ಕುಮಾರ ನಡಗೇರಿ ಆರೋಪಿಸಿದರು.
ಶಿರಹಟ್ಟಿ ಪಿಎಸ್‌ಐ ಈರಪ್ಪ ರಿತ್ತಿ ಅಮಾನತಿಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಮುಂದೆ ವಿವಿಧ ಸಂಘಟನೆಗಳು ನಡೆಸಿರುವ ಧರಣಿ ಸತ್ಯಾಗ್ರಹದಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಸಚಿವರು ಮುಖ್ಯಮಂತ್ರಿಗಳ ಆಣತಿಯಂತೆಯೇ ವಿವಿಧ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.
ದಲಿತರಿಗೆ ಅನ್ಯಾಯವಾದಾಗಲೂ ಜಿಲ್ಲೆಯ ಸಚಿವರು, ರಾಜಕೀಯ ವ್ಯಕ್ತಿಗಳು ಮಾತನಾಡದಿರುವುದು ಸಂದೇಹ ಮೂಡಿಸಿದೆ. ಆದಾಗ್ಯೂ ಜಿಲ್ಲೆಯ ಶಿರಹಟ್ಟಿಯಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ ರೈತನನ್ನು ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಬಂಧಿಸಿ ಇಸ್ಪೀಟ್ ಆಟದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ದಲಿತರ ಅಭಿವೃದ್ಧಿ ಕೇವಲ ಭಾಷಣದ ಸರಕಾಗಿದೆಯೇ ಹೊರತು ವಾಸ್ತವವಾಗಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿಸಿದರು.
ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಈ ಹಿಂದೆ ಲಕ್ಷೇಶ್ವರದಲ್ಲಿ ಇದೇ ರೀತಿ ವರ್ತಿಸಿದ್ದು, ಅವರ ವರ್ತನೆ ಖಂಡಿಸಿ ವಿವಿಧ ಹಿಂದು, ದಲಿತ ಸಂಘಟನೆಗಳು ಲಕ್ಷ್ಮೇಶ್ವರ ಬಂದ್‌ಗೆ ಕರೆ ಯಶಸ್ವಿಗೊಳಿಸಿದ ನಂತರ ವರ್ಗಾವಣೆಗೊಂಡಿದ್ದರು. ಇದೀಗ ಮತ್ತೇ ಶಿರಹಟ್ಟಿ ಪೊಲೀಸ್ ಠಾಣೆಗೆ ಆಗಮಿಸಿದ್ದು, ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ವೆಂಕಟೇಶ ದೊಡ್ಡಮನಿ, ಪ್ರಶಾಂತ ಕನ್ಯಾಳ, ಸೋಮಪ್ಪ ಲಮಾಣಿ, ಪರಶುರಾಮ ಡೊಂಕಬಳ್ಳಿ, ಗಂಗವ್ವ ಲಮಾಣಿ, ಗೀತಾ ಲಮಾಣಿ, ಶ್ವೇತಾ ಲಮಾಣಿ, ಸತೀಶ ಕುಂಬಾರ, ವಿಶಾಲ ಗೋಕಾವಿ, ಕಿರಣಸ್ವಾಮಿ ಹಿರೇಮಠ, ಮಂಜುನಾಥ ವಡ್ಡರ, ಆನಂದ ಹುಡೇದ, ರವಿ ಬಂಡಿವಡ್ಡರ, ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net