ಜಿಲ್ಲೆಯಲ್ಲಿ ಶಾಂತಿಯುತ, ಸುವ್ಯವಸ್ಥಿತ ಚುನಾವಣೆಗಾಗಿ ಸಕಲ ಸಿದ್ಧತೆ: ಸಿ.ಎನ್​. ಶ್ರಿಧರ

Gadag DC Visit
ಗದಗ ನಗರದ ನಗರಸಭೆ ಆವರಣದಲ್ಲಿ ಇರುವ ಮತದಾನ ಕೇಂದ್ರಕ್ಕೆ ಚುನಾವಣಾ ವೀಕ್ಷಕರಾದ ಮನೋಜ್​ ಜೈನ್​, ಜಿಲ್ಲಾಧಿಕಾರಿ ಸಿ ಎನ್​ ಶ್ರೀಧರ, ಎಸ್ಪಿ ಮಿಥುನ್​ ಹೆಚ್​ ಎನ್​, ಎಡಿಸಿ ದುರುಗೇಶ್​ ಕೆ ಆರ್​, ಎಸಿ ಗಂಗಪ್ಪ ಎಂ ಸೇರಿದಂತೆ ಇತರರು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಗದಗ

ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚುನಾವಣಾ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಅ. 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅ. 23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅ. 27ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಅ. 31ರಂದು ಚುನಾವಣಾ ಪ್ರಕ್ರಿಯೆ ರ್ಪೂಣಗೊಳ್ಳಲಿದೆ. ಜಿಲ್ಲೆಯಲ್ಲಿ 27 ಮತಗಟ್ಟೆಗಳ ಸ್ಥಾಪನೆ ಆಗಿವೆ. ಗದಗ ತಾಲೂಕಿನಲ್ಲಿ 14, ರೋಣ 3, ಮುಂಡರಗಿ 2, ನರಗುಂದ 2, ಗಜೇಂದ್ರಗಡ 2, ಶಿರಹಟ್ಟಿ 2 ಹಾಗೂ ಲೆ$್ಮಶ್ವರದಲ್ಲಿ 2 ಮತಗಟ್ಟೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. 27 ಮತಗಟ್ಟೆಗಳ ಪೈಕಿ 3 ಮತಗಟ್ಟೆಗಳನ್ನು ಅತಿಸೂಕ್ಷ$್ಮ, 10 ಮತಗಟ್ಟೆಗಳನ್ನು ಸೂಕ್ಷ$್ಮ ಹಾಗೂ 14 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ವೆಬ್​ಕಾಸ್ಟಿಂಗ್​ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 13,756 ಪುರುಷರು ಹಾಗೂ 7,838 ಮಹಿಳೆಯರು ಸೇರಿದಂತೆ ಒಟ್ಟು 21,594 ಪದವೀಧರ ಮತದಾರರಿದ್ದಾರೆ. ಗದಗ ತಾಲೂಕಿನಲ್ಲಿ 10,250, ಮುಂಡರಗಿ 1,643, ನರಗುಂದ 1,734, ರೋಣ 2,528, ಗಜೇಂದ್ರಗಡ 2,408, ಶಿರಹಟ್ಟಿ 1,493 ಹಾಗೂ ಲೆ$್ಮಶ್ವರದಲ್ಲಿ 1,538 ಮತದಾರರು ಇದ್ದಾರೆ.

ಮತದಾರರು ಮತದಾನ ದಿನದಂದು ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದು. ಆಧಾರ್​ ಕಾರ್ಡ, ವಾಹನ ಚಾಲನಾ ಪರವಾನಗಿ, ಆದಾಯ ತೆರಿಗೆ ಗುರುತಿನ ಚೀಟಿ, ಭಾರತೀಯ ಪಾಸ್​ಪೋರ್ಟ, ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ಉದ್ದಿಮೆಗಳು ಹಾಗೂ ಖಾಸಗಿ ಔದ್ಯಮಿಕ ಸಂಸ್ಥೆಗಳು ನೀಡಿರುವ ಭಾವಚಿತ್ರ ಇರುವ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್​ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಸಂಬಂಧಿತ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿರುವ ಮೂಲ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಅಂಗವೈಕಲ್ಯ ಪ್ರಮಾಣಪತ್ರ ಹಾಗೂ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದನ್ನು ಬಳಸಬಹುದು ಎಂದರು.

ಸಿಬ್ಬಂದಿ ನಿಯೋಜನೆ:

ಚುನಾವಣಾ ಕಾರ್ಯಕ್ಕಾಗಿ 9 ಸೆಕ್ಟರ್​ ಅಧಿಕಾರಿಗಳು, 27 ಮತಗಟ್ಟೆ ಮುಖ್ಯಾಧಿಕಾರಿಗಳು ಸೇರಿದಂತೆ ಒಟ್ಟು 128 ಮತಗಟ್ಟೆ ಸಿಬ್ಬಂದಿ, 27 ಗ್ರೂಪ್​-ಡಿ ಸಿಬ್ಬಂದಿ ಹಾಗೂ 27 ಮೈಕ್ರೋ ಅಬ್ಸರ್ವರ್​ಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗೆ ಅ. 14 ಮತ್ತು 17ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸ್​ ನಿಯೋಜನೆ:

ಶಾಂತಿ, ಸುವ್ಯವಸ್ಥೆಗಾಗಿ ಪೊಲೀಸ್​ ಬಂದೋಬಸ್ತ ಕೈಗೊಳ್ಳಲಾಗಿದೆ. ಇಬ್ಬರು ಡಿವೈಎಸ್​ಪಿ, 10 ಸಿಪಿಐ, 14 ಪಿಎಸ್​ಐ, 32 ಎಎಸ್​ಐ, 56 ಹೆಡ್​ ಕಾನ್​ಸ್ಟೇಬಲ್​, 119 ಪೊಲೀಸ್​ ಕಾನ್​ಸ್ಟೇಬಲ್​ ಹಾಗೂ 59 ಹೋಮಗಾರ್ಡ ಸಿಬ್ಬಂದಿ ಸೇರಿದಂತೆ ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಡಿಮಸ್ಟರಿಂಗ್​ ಕೇಂದ್ರಗಳು:

ಗದಗ ತಾಲೂಕಿಗೆ ಸಂಬಂಧಿಸಿದ ಮತಪೆಟ್ಟಿಗೆಗಳನ್ನು ಗದಗ-ಬೆಟಗೇರಿಯ ನಗರಸಭೆ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ, ಲಕ್ಷ್ಮೇಶ್ವರ ತಾಲೂಕಿಗೆ ಸಂಬಂಧಿಸಿದ ಮತಪೆಟ್ಟಿಗೆಗಳನ್ನು ಪುರಸಭೆ ಕಾರ್ಯಾಲಯಕ್ಕೆ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ ಹಾಗೂ ನರಗುಂದ ತಾಲೂಕುಗಳ ಮತಪೆಟ್ಟಿಗೆಗಳನ್ನು ಆಯಾ ತಾಲೂಕುಗಳ ತಹಸೀಲ್ದಾರ್​ ಕಚೇರಿಗಳಲ್ಲಿ ಸ್ಥಾಪಿಸಿರುವ ಡಿ-ಮಸ್ಟರಿಂಗ್​ ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ನಂತರ ಮತಪಟ್ಟಿಗಳು ಹಾಗೂ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಲಕೋಟೆಗಳನ್ನು ಪೊಲೀಶ್​ ಭದ್ರತೆಯೊಂದಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net