

ಪ್ರಮುಖ ಮುಖ್ಯಾಂಶಗಳು
ಪಟ್ಟಣದ ಹೊರವಲಯದಲ್ಲಿ ಉತ್ತಮ ಗಾಳಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ವಾಯುವಿಹಾರಕ್ಕೆ ಬಂದರೆ ಇಲ್ಲಿ ಬಿದ್ದಿರುವ ಮದ್ಯದ (Alcohol)
ಬಾಟಲ್‌ಗಳನ್ನು ನೋಡಿ ಓಡಾಡಲು ಹೆದರಿಕೆಯಾಗುತ್ತಿದೆ. ಇಂಥವರ ವಿರುದ್ಧ ಪೊಲೀಸ್ ಹಾಗೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಖಾಲಿ ಬಿದ್ದಿರುವ ಬಡಾವಣೆ ಮಾಲೀಕರು ಸುತ್ತ ತಂತಿಬೇಲಿ ನಿರ್ಮಿಸಿ ಯಾರೂ ಲೇಔಟ್‌ಗಳಲ್ಲಿ ಸುಳಿಯದಂತೆ ಕ್ರಮ ಕೈಗೊಳ್ಳಬೇಕು.
— ಈಶ್ವರ ಮೆಣಸಿನಕಾಯಿ, ರೋಣ ನಿವಾಸಿ
ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವಿಸುವುದು ಅಪರಾಧ. ಬಡಾವಣೆಗಳಲ್ಲಿ ಮದ್ಯ (Alcohol) ಸೇವಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂದಿನಿಂದಲೇ ಅಂಥ ಬಡಾವಣೆ ಗುರುತಿಸಿ ಬೀಟ್ ವ್ಯವಸ್ಥೆ ಮಾಡಲಾಗುವುದು.
— ವಿಜಯಕುಮಾರ ನಾಯಕ, ಸಿಪಿಐ ರೋಣ
ಒಬ್ಬ ವ್ಯಕಿ 2.3 ಲೀಟರ್‌ವರೆಗೂ ಮದ್ಯ (Alcohol) ಖರೀದಿಸಿ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶವಿದೆ. ಆದರೆ, ಬಡಾವಣೆಗಳಲ್ಲಿ ಎಣ್ಣೆ ಹೊಡೆದು ಗಲಾಟೆ ಮಾಡುವುದು ಅಪರಾಧ. ಅಂಥ ಪ್ರಕರಣ ಕಂಡುಬಂದಲ್ಲಿ ಅವರಲ್ಲಿ ಜಾಗೃತಿ ಮೂಡಿಸಲಾಗುವುದು.
— ಶ್ರೀದೇವಿ ಕೊಳ್ಳಿ, ಅಬಕಾರಿ ನಿರೀಕ್ಷಕಿ ರೋಣ