Akka Mahadevi ಅಕ್ಕಮಹಾದೇವಿ ಸಂದೇಶ ಜೀವನಕ್ಕೆ ದಾರಿದೀಪ

ರೋಣ ಗುಲಗಂಜಿ ಮಠದಲ್ಲಿ ಅಕ್ಕಮಹಾದೇವಿ ಜಯಂತಿ Akka Mahadevi ಆಚರಿಸಲಾಯಿತು.
ರೋಣ ಗುಲಗಂಜಿ ಮಠದಲ್ಲಿ ಅಕ್ಕಮಹಾದೇವಿ ಜಯಂತಿ Akka Mahadevi ಆಚರಿಸಲಾಯಿತು.
Published on
ರೋಣ: ವೈರಾಗ್ಯ ನಿಧಿಯಾಗಿ ಬಾಳಿ ಬದುಕಿದ ಸಾದ್ವಿ ಅಕ್ಕಮಹಾದೇವಿಯ Akka Mahadevi ಜೀವನ ಸಾಧನೆಯ ಸಂದೇಶವೇ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಬಣಜಿಗ ಸಮಾಜದ ರೋಣ ತಾಲೂಕು ಕಾರ್ಯಾಧ್ಯಕ್ಷ ವೀರಣ್ಣ ಶೆಟ್ಟರ್ ಹೇಳಿದರು.
ಪಟ್ಟಣದ ಗುಲಗಂಜಿಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನಗಾರ್ತಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಕಮಹಾದೇವಿ ಜೀವನ ಸಂದೇಶಗಳನ್ನು ವಚನಗಳ ಮೂಲಕ ಜಗತ್ತಿಗೆ ನೀಡಿದರು. ಅಕ್ಕ ಮಹಾದೇವಿಯವರ ಸುಮಾರು 345 ವಚನಗಳು ಲಭ್ಯವಿದ್ದು, ಅದರಲ್ಲಿನ ಒಂದೊಂದು ವಚನಗಳು ಸಂಶೋಧನೆ ನಡೆಸುವಷ್ಟು ಮಾಹಿತಿ ಹೊಂದಿವೆ ಎಂದರು.
ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ಮಹಿಳೆಯರಿಗೆ ಪ್ರಥಮವಾಗಿ ಧಾರ್ಮಿಕ ಸ್ವಾತಂತ್ರ್ಯ ನೀಡಿದವರು ಕ್ರಾಂತಿ ಪುರುಷ ಬಸವಣ್ಣ. ಮಹಿಳೆಯಿಂದ ಜಗತ್ತಿನಲ್ಲಿ ಏನು ಬೇಕಾದರೂ ಬದಲಾವಣೆ ತರಲು ಸಾಧ್ಯ ಎಂದು ತೋರ್ಪಡಿಸಿದವರು ಅಕ್ಕಮಹಾದೇವಿ ಎಂದರು.
ಸಮಾಜದ ಕಾರ್ಯದರ್ಶಿ ಚನ್ನಮಲ್ಲಪ್ಪ ಗದಗ ಮಾತನಾಡಿ, ಶರಣರು ಸಮಾಜದಲ್ಲಿ ಜನರು ಹೇಗೆ ಬದುಕಬೇಕು ಎಂಬುದನ್ನು ಹೇಳುವ ಮೊದಲು ತಾವು ಬದುಕಿ ತೋರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಧರ್ಮ ಏನು ಎಂಬುದನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ವಚನ ರೂಪದಲ್ಲಿ ರಚಿಸಿ ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ಗುಲಗಂಜಿ ಮಠದ ಗುರುಪಾದ ದೇವರು ಆಶೀರ್ವಚನ ನೀಡಿದರು. ಬಣಜಿಗ ಸೊಸೈಟಿ ಅಧ್ಯಕ್ಷ ಶಿವಣ್ಣ ಯಾವಗಲ್ಲ, ಸೊಸೈಟಿ ನಿರ್ದೇಶಕ ಸೋಮು ಬಿ. ಚರೇದ, ಬಸವರಾಜ ಕೊಟಗಿ, ತಮ್ಮಣ್ಣ ಲಕ್ಷ್ಮೇಶ್ವರ, ಚಂದ್ರಶೇಖರ ಭದ್ರಾಪುರ, ಚಂದ್ರಶೇಖರ ಅಳಗವಾಡಿ, ವಿರೇಶ ಬಳ್ಳೊಳ್ಳಿ, ರಾಜು ಸಂಗನಬಶೆಟ್ರ, ಮುತ್ತಣ್ಣ ಮೆಣಸಿನಕಾಯಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net