akka ಅಕ್ಕಮಹಾದೇವಿ ಮಹಿಳೆಯರಿಗೆ ಆದರ್ಶ

akka ಲಕ್ಷ್ಮೇಶ್ವರದ ಪುರಸಭೆಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
akka ಲಕ್ಷ್ಮೇಶ್ವರದ ಪುರಸಭೆಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
Published on
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗುರುವಾರ ಅಕ್ಕಮಹಾದೇವಿ (akka) ಜಯಂತಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.
ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಹಾಗೂ ಹನುಮಂತಪ್ಪ ನಂದೆಣ್ಣವರ ಮಾತನಾಡಿ, ಮಹಿಳೆಯರ ಬದುಕಿಗೆ ಅಕ್ಕಮಹಾದೇವಿ ಆದರ್ಶವಾಗಿದ್ದಾಳೆ, 12ನೇ ಶತಮಾನದ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದಾರೆ. ಅಧಿಕಾರ ಸಂಪತ್ತು ವೈಭವ ಆಡಂಬರ ಬೋಗ ಜೀವನವನ್ನು ಸಂಪೂರ್ಣವಾಗಿ ತಿರಸ್ಕರಿಸಿ ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನರಲ್ಲಿ ಬೆರೆತು ಬದುಕಿನ ಮೌಲ್ಯಗಳನ್ನು ವಚನದ ಮೂಲಕ ಪ್ರತಿಪಾದಿಸಿದರು ಎಂದರು.
ಕಂದಾಯ ಅಧಿಕಾರಿ ಸುರೇಶ ಪೂಜಾರ, ಕಂದಾಯ ನಿರೀಕ್ಷಕ ವೆಂಕಟೇಶ ರಾಮಗೇರಿ, ನೇತ್ರಾ ಹೊಸಮನಿ, ಇಂಜಿನಿಯರ್ ಈರಣ್ಣ ದುರಗಣ್ಣವರ, ಲಿಂಬಯ್ಯನಮಠ, ಉಮಾ ಬೆಳವಿಗಿ, ಮಂಜುನಾಥ ಹೆಬ್ಬಾಳ, ಮಹೇಶ ಹೊಸಮನಿ, ಲಲಿತಾ ಶೆಳಕೆ ಸಾರ್ವಜನಿಕರಾದ ಕೃಷ್ಣ ಕುಲಕರ್ಣಿ, ಗಂಗಾಧರ ಅರಳಿ, ಸುರೇಶ ಹಟ್ಟಿ, ಶಂಕರ ಬ್ಯಾಡಗಿ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net