agriculture: ನಿಗದಿತ ದರದಲ್ಲಿ ರಸಗೊಬ್ಬರ ಮಾರಿ

ನರಗುಂದ ಮಿನಿವಿಧಾನಸೌಧ ಕಚೇರಿ ಸಭಾಂಗಣದಲ್ಲಿ ತಾಲೂಕಿನ ರಸಗೊಬ್ಬರ ಮಾರಾಟಗಾರರ ಸಭೆ ತಹಸೀಲ್ದಾರ್ ಶ್ರೀಶೈಲ ತಳವಾರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು. ಎಸ್.ಎಫ್. ಬೆಳವಟಗಿ, ವೆಂಕಟೇಶ ಗುಡಿಸಾಗರ, ಪ್ರವೀಣ ಪಾಟೀಲ, ಇತರರಿದ್ದರು.
ನರಗುಂದ ಮಿನಿವಿಧಾನಸೌಧ ಕಚೇರಿ ಸಭಾಂಗಣದಲ್ಲಿ ತಾಲೂಕಿನ ರಸಗೊಬ್ಬರ ಮಾರಾಟಗಾರರ ಸಭೆ ತಹಸೀಲ್ದಾರ್ ಶ್ರೀಶೈಲ ತಳವಾರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು. ಎಸ್.ಎಫ್. ಬೆಳವಟಗಿ, ವೆಂಕಟೇಶ ಗುಡಿಸಾಗರ, ಪ್ರವೀಣ ಪಾಟೀಲ, ಇತರರಿದ್ದರು.
Published on
ನರಗುಂದ: ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪರವಾನಿಗೆ ನವೀಕರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಬಾರದರು. ಒಂದು ವೇಳೆ ಕಂಡು ಬಂದಲ್ಲಿ ಅಂತಹ ರಸಗೊಬ್ಬರ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಫ್.ಬೆಳವಟಗಿ ಹೇಳಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣದ ಮಿನಿವಿಧಾನಸೌಧ ಕಚೇರಿ ಸಭಾಭವನದಲ್ಲಿ ತಾಲೂಕಿನ ಖಾಸಗಿ ಹಾಗೂ ವಿವಿಧ ಸಹಕಾರಿ ಸಂಘಗಳ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಎಫ್‌ಐಡಿಯಲ್ಲಿ ನಿಗದಿ ಪಡಿಸಿದಂತೆ ನಿಗದಿತ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರ ಮಾರಾಟಮಾಡುವುದು ಕಡ್ಡಾಯವೆಂದು ತಿಳಿಸಿದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಕೆ-ಕಿಸಾನ್ ತಂತ್ರಾಂಶ ಬಳಸಿಕೊಂಡು ಪಿಒಎಸ್ ಮಷಿನ್ ಮೂಲಕ ರಸಗೊಬ್ಬರ ವಿತರಣೆಯಾಗಬೇಕು. ಇದರಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ರೈತರು ಮಿತವ್ಯಯವಾಗಿ ರಸಗೊಬ್ಬರ ಬಳಸಬೇಕು. ಇದರಿಂದ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಾಧ್ಯವೆಂದು ಹೇಳಿದರು.
ರಸಗೊಬ್ಬರ ಮಾರಾಟಗಾರರು ಕೃಷಿ ಇಲಾಖೆ ಸಹಯೋಗದೊಂದಿಗೆ ರೈತರಿಗೆ ಕೃಷಿಯಲ್ಲಿ ಇರುವ ಸಫಲತೆ ಮಾಹಿತಿಯನ್ನು ತಿಳಿಸಿಕೊಡುವುದು ಅಗತ್ಯವಿದೆ. ಯೂರಿಯಾ ಡಿಎಪಿಗಳ ಬದಲಾಗಿ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಅಂತಹ ದ್ರವರೂಪದ ರಸಗೊಬ್ಬರಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಿ, ಎಲ್ಲ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ಮಳಿಗೆಯಲ್ಲಿರುವ ರಸಗೊಬ್ಬರ ಮಾಹಿತಿಯುಳ್ಳ ದರಪಟ್ಟಿ ನಮೂದಿಸಬೇಕೆಂದು ತಿಳಿಸಿದರು.
ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಗುಡಿಸಾಗರ ಮಾತನಾಡಿ, ನಾವು ಇಲಾಖೆ ಮಾರ್ಗದರ್ಶನ ಮತು ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುತ್ತೇವೆ ಮತ್ತು ರೈತರಿಗೆ ಭಿತ್ತನೆಗೊಳಿಸಲು ಅಗತ್ಯವಾದ ರಸಗೊಬ್ಬರ ನಿಗದಿತವಾಗಿ ನೀಡುತ್ತೇವೆಂದು ಹೇಳಿದರು.
ಸಭೆಯಲ್ಲಿ ಆತ್ಮ ಯೋಜನೆ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಪ್ರವೀಣ ಪಾಟೀಲ, ಶಿವಾನಂದ ಸಾಠೆ, ಶರತ್ ಪಾಟೀಲ ಸೇರಿದಂತೆ ವಿವಿಧ ಮಾರಾಟಗಾರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net