abvp: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ (abvp) ಭರ್ತಿಗೆ ಆಗ್ರಹಿಸಿ ಶಿರಹಟ್ಟಿಯಲ್ಲಿ ಎಬಿವಿಪಿ ವತಿಯಿಂದ ತಹಶೀಲ್ದಾರ್  ಕೆ. ರಾಘವೇಂದ್ರರಾವ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪರಶುರಾಮ ಕಳ್ಳಿಮನಿ, ಅಭಿಷೇಕ ಉಮಚಗಿ, ಸೋಮಶೇಖರ ದೇಸಾಯಿಪಟ್ಟಿ ಇತರರಿದ್ದರು.

Published on
ಶಿರಹಟ್ಟಿ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಸರ್ಕಾರದ ಕ್ರಮ ಖಂಡಿಸಿ (ABVP) ಎಬಿವಿಪಿ ವತಿಯಿಂದ ಮಂಗಳವಾರ ಪಟ್ಟಣದ ಖಾನಾಪುರ ರಸ್ತೆ ಕ್ರಾಸ್ ಬಳಿ ಕೆಲಕಾಲ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಕೆ. ರಾಘವೇಂದ್ರರಾವ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಬಿಪಿಪಿ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ ಕಳ್ಳಿಮನಿ ಮಾತನಾಡಿ, ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ವಿವಿಧ ಪದವಿಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಸರ್ಕಾರಿ ನೌಕರಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತರೂ ಸರ್ಕಾರದ ನಡೆಯಿಂದ ಜಿಗುಪ್ಪೆ ಪಡುವಂತಾಗಿದೆ. ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಯಾವುದೇ ಹುದ್ದೆ ಭರ್ತಿ ಮಾಡದೇ ಯುವಕರಿಗೆ ಅನ್ಯಾಯವೆಸಗುತ್ತಿದೆ. ಇದರಿಂದ ವಿದ್ಯಾವಂತ ಯುವಕ, ಯುವತಿಯರು ಸರ್ಕಾರಿ ಉದ್ಯೋಗದಿಂದ ವಂಚಿತರಾಗುವ ಸ್ಥಿತಿ ಬಂದೊದಗಿದೆ ಎಂದರು.
ಪಿಎಸ್‌ಐ ಈರಪ್ಪ ರಿತ್ತಿ, ಅಭಿಷೇಕ ಉಮಚಗಿ, ಸೋಮಶೇಖರ ದೇಸಾಯಿಪಟ್ಟಿ, ಶಶಾಂಕ ಪಲ್ಲೇದ, ಪಾರ್ವತಿ ಬಳಿಗಾರ, ಸಂಜನಾ ಪಾಟೀಲ, ಅನು ಅಣ್ಣಿಗೇರಿ, ಸವಿತಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net