

ಆಗಷ್ಟ 15 ರೊಳಗಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಖರಬಸ್ತಾನ ರುದ್ರಭೂಮಿ ಒದಗಿಸಲು ಅಧಿಕಾರಿಗಳಿಗೆ ಸೂಚನೆ
ಗದಗ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸರಬರಾಜು ಕುರಿತು ಜೂನ್ 20 ರೊಳಗೆ ಥರ್ಢ್ ಪಾರ್ಟಿಯಿಂದ ವರದಿ ಪಡೆದು ಸಲ್ಲಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಕೆಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಜೆನ್ಸಿ ಒಪ್ಪಂದ ಪ್ರಕಾರ ನೀಡಬೇಕಾಗಿದ್ದ ಎಂಎಲ್ ಡಿ ನೀರು ನೀಡದೇ ಇದ್ದ ಕಾರಣ ಸಮಿಕ್ಷೇ ನಡಿಸಿ ಒಪ್ಪಂದ ಪ್ರಕಾರ ನೀರು ಪೂರೈಕೆ ಮಾಡದಿದ್ದಲ್ಲಿ ಎಜೆನ್ಸಿಗೆ ದಂಡ ವಿಧಿಸಬೇಕು ಎಂದರು
ಬೇಸಿಗೆಯಲ್ಲಿ ಜಿಲ್ಲೆಯ ಜನರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ನರಗುಂದ ಶಾಸಕ ಸಿ ಸಿ ಪಾಟೀಲ ಅವರು ಮಾತನಾಡಿ ನರುಗುಂದ ಕ್ಷೇತ್ರದಲ್ಲಿರುವ ತಾಂಡಾಗಳಿಗೆ ವಸತಿ ಶಾಲೆ ಪ್ರಾರಂಭಿಸಲು ಸಲ್ಲಿಸಲು ತಿಳಿಸಲಾಗಿತ್ತು ಎಂದು ಕೇಳಿದರು
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಮಾತನಾಡಿ ಪ್ರಸ್ತಾವನೆಗಳನ್ನು ಸಲ್ಲಿಸಿದ ಕೂಡಲೇ ಒಂದು ಪ್ರತಿಯನ್ನು ಸಂಬಂಧಪಟ್ಟ ಶಾಸಕರಿಗೆ ಕಳುಹಿಸಬೇಕು ಎಂದು ಅಧಿಕಾರಿಗೆ ನಿರ್ದೇಶಿಸಿದರು.
ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರ ಮಾತನಾಡಿ ಈ ಹಿಂದೆ ಪಿಯುಸಿ ಯಲ್ಲಿ ಜಿಲ್ಲೆಯು ಕೊನೆಯ ಸ್ಥಾನ ಪಡೆದು ಕೊಂಡಿತ್ತು ಈ ಬಾರಿ 25 ನೇ ಸ್ಥಾನಕ್ಕೆರಿದ್ದು ಅಭಿನಂದನಿಯ, ನಾವು ಅದು ಕೊಂಡ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿರುವುದಿಲ್ಲ ಮತ್ತು ಫಲಿತಾಂಶ ಬಂದ ಕೂಡಲೇ ಅದರ ಬಗ್ಗೆ ವಿಶ್ಲೇಷಣೆ ಮಾಡಿಕೊಳ್ಳಬೇಕು, ಸರ್ಕಾರಿ ,ಅನುದಾನಿತ ಅನುದಾನರಹಿತ ಇದರಲ್ಲಿ ಯಾವ ಕಾಲೇಜಿನ ಫಲಿತಾಂಶ ಉತ್ತಮ ವಾಗಿದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕು ಉಪನ್ಯಾಸಕರು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೆ ಉತ್ತಮ ವಾಗಿ ಗಂಭೀರತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಮಾತನಾಡಿ ಎಲ್ಲಾ ಕಾಲೇಜು ಪ್ರಚಾರ್ಯರ ಸಭೆ ಕರೆದು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಕಾಲೇಜು ವಾರು ಗುರಿ ನಿಗದಿ ಮಾಡಿ ಕಾರ್ಯಗಾರ ಮಾಡಬೇಕು ಎಂದು ಜಿ ಪಂ ಸಿ ಇಓ ಅವರಿಗೆ ಸೂಚನೆ ನೀಡಿದರು
ಆಗಷ್ಟ 15 ರೊಳಗಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಖಬರಸ್ಥಾನ ರುದ್ರಭೂಮಿ ಯನ್ನು ಒದಗಿಸಬೇಕು ಎಂದು ನುಡಿದರು
ಕರ್ನಾಟಕ ಖನಿಜ ಅಬಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್.ಪಾಟೀಲ ಮಾತನಾಡಿ ನರೇಗಾ ಕಾಮಗಾರಿಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಮೂಲಭೂತ ಅಭಿವೃದ್ದಿಗೆ ಪೂರಕವಾದ ಕಾಮಗಾರಿಗೆ ಸೇರಿದಂತೆ ರೈತರ ಬದು ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಮಾಡಿಕೊಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಿದ ಇಲಾಖೆಗಳಿಗೆ ಸಚಿವರು ಅಭಿನಂದಿಸಿದರು.
ಶಾಸಕ ಚಂದ್ರು ಲಮಾಣಿ ಮಾತನಾಡಿ ಲಕ್ಷ್ಮೇಶ್ವರ ತಾಲೂಕಿಗೆ ತುಂಗಭದ್ರ ನದಿ ನೀರನ್ನು ಪೂರೈಸುವ ಪೈಪು ಪದೇ ಪದೇ ದುರಸ್ಥಿ ಆಗುತ್ತಿದ್ದು ಅದಕ್ಕೆ ಅಧಿಕಾರಿ ಶಾಶ್ವತ ಪರಿಹಾರ ಒದಗಿಸಬೇಕು ಎಂದರು
ಇದಕ್ಕೆ ಪ್ರತಿಕೀಯಸಿದ ಅಧಿಕಾರಿಗಳು ಸೂರಣಗಿ ಯಿಂದ ಲಕ್ಷ್ಮೇಶ್ವರ ವರಗಿನ ಪೈಪ್ ದುರಸ್ಥಿ ಕಾರ್ಯ ಈಗಾಗಲೆ ಟೆಂಡರ್ ಪ್ರಕ್ರೀಯೇ ಪ್ರಾರಂಭಿಸಿದ್ದು ಶಿಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ಮಾಜಿ ಶಾಸಕ ಡಿ ಆರ್ ಪಾಟೀಲ, ಎಸ್ ಎನ್ ಬಳ್ಳಾರಿ, ಎಂ ಡಿ ಮಕಾಂದರ, ಪ್ರಬು ಮೇಟಿ, ಅಶೋಕ ಮಂದಾಲಿ, ಶಾರದ ಹಿರೇಗೌಡರ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿ .ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಸೇರಿದಂತೆ ಗಣ್ಯರು ಅಧಿಕಾರಿಗಳು ಹಾಜರಿದ್ದರು.