ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ

09GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ತಾಲೂಕಾ ಆರೋಗ್ಯಾಽಕಾರಿಗಳ ಕಚೇರಿ, ಉಪ ಸಂರಕ್ಷಣಾ ಅಽಕಾರಿಗಳ ಕಚೇರಿ, ವಲಯ ಅರಣ್ಯ ಅಽಕಾರಿಗಳ ಕಚೇರಿ, ಮೃಗಾಲಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಮಂಗಳವಾರ ವಿಶ್ವ ಪ್ರಾಣಿಜನ್ಯರೋಗಗಳ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಸಮೀಕ್ಷಣಾಽಕಾರಿ ಡಾ.ವೆಂಕಟೇಶ ರಾಠೋಡ ಮಾತನಾಡಿ, ನೈಸರ್ಗಿಕವಾಗಿ ಪ್ರಾಣಿ ಮತ್ತು ಮನುಷ್ಯ ಸಂಕುಲನದ ನಡುವೆ ಪರಸ್ಪರ ರೋಗ ಹರಡುವ ಪ್ರಕ್ರಿಯೆ ಇದೆ. ಪ್ರಾಣಿಜನ್ಯ ರೋಗಗಳ ಸರಿಯಾದ ನಿರ್ವಹಣೆ ಆಗದಿದ್ದರೆ ಮನುಕುಲದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ಪ್ರಾಣಿಗಳಿಂದ ಮನುಷ್ಯನಿಗೆ ರೇಬಿಸ್, ಹಕ್ಕಿಜ್ವರ, ಹಂದಿಜ್ವರ, ಬ್ರುಸ್ಸೆಲಾ, ಅಂತ್ರಾಕ್ಸ್ ಮುಂತಾದ ರೋಗಗಳು ಹರಡುವುದರ ಬಗ್ಗೆ ಹಾಗೂ ಪರಿಸರ ಸ್ವಚ್ಛತೆಗಳ ಬಗ್ಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ರೋಗ ನಿರೋಧಕ ಲಸಿಕೆಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಡಾ. ಎಸ್. ಎಸ್. ನೀಲಗುಂದ ಮಾತನಾಡಿ, ಪ್ರಾಣಿಜನ್ಯ ರೋಗಗಳಲ್ಲಿ ವಿಶೇಷವಾಗಿ ರೇಬಿಸ್ ಪ್ರಕರಣಗಳ ಅಪಾಯಕಾರಿ ವಿಷಯದ ಬಗ್ಗೆ ಎಲ್ಲರಿಗೂ ಮನದಟ್ಟಾಗಬೇಕು. ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ರೇಬಿಸ್‌ಗೆ ಸಂಬAಽಸಿದ ಲಸಿಕೆಗಳು ಉಚಿತವಾಗಿ ಸಿಗುತ್ತವೆ ಎಂಬುದರ ಬಗ್ಗೆ ಎಲ್ಲರಿಗೂ ಅರಿವಿರಬೇಕು ಎಂದರು.

ಮೃಗಾಲಯ ಸಿಬ್ಬಂದಿ ಮಹಾಂತೇಶ ಪೋಲಿಸ್ ಪಾಟೀಲ್, ಗೀತಾ ಕಾಂಬ್ಳೆ, ಜಿಲ್ಲಾ ಆರೋಗ್ಯ ಶಿಕ್ಷಣಾಽಕಾರಿಗಳು, ಜಿಲ್ಲಾ ಸಮೀಕ್ಷಣಾ ಘಟಕದ ಅಽಕಾರಿಗಳು, ಸಿಬ್ಬಂದಿ ವರ್ಗದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net