ಗದಗ ಮೃಗಾಲಯ ವೀಕ್ಷಿಸಿದ ಸಚಿವ ಈಶ್ವರ ಖಂಡ್ರೆ

IMG-20230813-WA0009
Published on

ಗದಗ: ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರುಗಳು ರವಿವಾರದಂದು ಬಿಂಕದಕಟ್ಟಿಯ ಮೃಗಾಲಯಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳ ವೀಕ್ಷಣೆ ವೇಳೆ ಗದಗ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಮೃಗಾಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರವಾಸಿಗರನ್ನು ಆಕರ್ಷಿಸಲು ಆನೆ, ಜಿರಾಫೆ, ಜಿಬ್ರಾಗಳನ್ನು ಒದಗಿಸುವದರ ಜೊತೆಗೆ ಅವುಗಳ ನಿರ್ವಹಣೆಗಾಗಿ ಅನುದಾನ ನೀಡಬೇಕು. ಗದಗ ಸುತ್ತಮುತ್ತಲಿನ ಭಾಗದಲ್ಲಿ ಇರುವ ಏಕೈಕ ಮೃಗಾಲಯ ಬಿಂಕದಕಟ್ಟಿಯ ಮೃಗಾಲಯವಾಗಿದೆ. ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಪ್ರಸಿದ್ಧಿಯಾಗಿದ್ದು ಇನ್ನೂ ಹೆಚ್ಚಿನ ಪ್ರಾಣಿ ಸಂಪತ್ತನ್ನು ಈ ಮೃಗಾಲಯದಲ್ಲಿ ಮಾಡಲು ಸೂಕ್ತ ಸಹಕಾರ ಹಾಗೂ ಅನುದಾನ ಒದಗಿಸುವಂತೆ ಅರಣ್ಯ ಸಚಿವರಾದ ಈಶ್ವರ.ಬ.ಖಂಡ್ರೆ ಅವರಲ್ಲಿ ಕೋರಿದರು.

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಶಾಸಕ ಎಸ್.ಎಸ್.ಪಾಟೀಲ, ಧಾರವಾಡ ವಲಯದ ಸಿ.ಸಿ.ಎಫ್, ಯತೀಶಕುಮಾರ, ಡಿ.ಸಿ.ಎಫ್, ದಿಪೀಕಾ ಬಾಜಪೇಯಿ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂಧಿಗಳು, ಸಾರ್ವಜನಕರು, ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net