ವಿ ಆರ್​ ಕುಷ್ಟಗಿ ಮೆಮೋರಿಯಲ್​ ಮಹಾವಿದ್ಯಾಲಯಕ್ಕೆ ಸಮಗ್ರ ವೀರಗ್ರಾಣಿ ಪ್ರಶಸ್ತಿ

Oplus_0
Oplus_0
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ಕವಿವಿ ವತಿಯಿಂದ ಕಳೆದ ಮೂರು ದಿನಗಳಿಂದ ನಡೆದ ಯುನಜನೋತ್ಸವ ಕಾರ್ಯಕ್ರದ ಸಮಾರೂಪ ಸಮಾರಂಭ ಜರುಗಿತು. ಪ್ರಸಕ್ತ ಸಾಲಿನ ಯುವಜನೋತ್ಸವದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ವಿ. ಆರ್​. ಕುಷ್ಟಗಿ ವಾಣಿಜ್ಯ ಮೆಮೋರಿಯಲ್​ ಕಾಲೇಜಿಗೆ ಸಮಗ್ರ ವೀರಗ್ರಾಣಿ ಪ್ರಶಸ್ತಿ ಲಭಿಸಿತು.

ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರು ಅವರು ಪ್ರಶಸ್ತಿ ವಿತರಿಸಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸಂಸತಿಗೆ ಗದಗ ಜಿಲ್ಲೆಗೆ ಹೆಸರುವಾಸಿ ಆಗಿದೆ. ನಮ್ಮ ಜಿಲ್ಲೆಯ ಮಣ್ಣಿನ ಗುಣ ವಿಶೇಷವಾಗಿದೆ. ಪುಟ್ಟರಾಜ ಕವಿ ಗವಾಯಿಗಳು, ಭೀಮಸೇನ್​ ಜೋಶಿ ಅವರಂತಹ ಮಹಾತ್ಮರು ಹುಟ್ಟಿದ ನಾಡು ನಮ್ಮ ಗದುಗ. ಇಂಥ ಜಿಲ್ಲೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಆಯ್ಕೆ ಆಗುವ ವಿದ್ಯಾಥಿರ್ಗಳು ಬರಿ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಬಾರದು. ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ಜಿಲ್ಲೆಯ ಕೀತಿರ್ ಪತಾಕೆ ಹಾರಿಸಬೇಕು ಎಂದರು. ಪ್ರತಿ ಮಕ್ಕಳಲ್ಲಿ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳಕು ಚೆಲ್ಲುವ ಕೆಲಸ ಶಿಕ್ಷಕರು ಮಾಡಬೇಕು. ದೇಶದ ಸಂಸತಿ ಮತ್ತು ಕಲೆ ಸಂಸ್ಕಾರ ಬೇರೆ ದೇಶಗಳಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೆಳೆಸಿಕೊಂಡು ಹೋಗುವ ಮೂಲಕ ಜಗತ್ತು ನಮ್ಮ ಕಡೆ ನೋಡುವಂತೆ ಆಗಬೇಕು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಪಿ. ಆರ್​. ಅಡವಿ ಮಾತನಾಡಿ, ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 700ಕ್ಕೂ ಹೆಚ್ಚು ಸ್ಪಧಿರ್ಗಳು ಈ ಒಂದು ಯುವ ಜನೋತ್ಸವದಲ್ಲಿ ಭಾಗವಹಿಸಿದ್ದರು. ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ, ಇಂದಿನ ಸೋಲು ಮುಂದಿನ ಗೆಲುವಿನ ಮೆಟ್ಟಿಲಾಗಬೇಕು. ಅದರೊಂದಿಗೆ ಪರಿಶ್ರಮವು ಕೂಡ ಬಹಳಷ್ಟು ಮುಖ್ಯವಾಗಿದೆ. ನಿಮ್ಮ ಮಗುವಿನ ಯಶಸ್ಸು ಅದರ ಖುಷಿಯ ಮೇಲೆ ನಿಂತಿದೆ. ವಿದ್ಯಾಥಿರ್ಗಳಿಗೆ ಆಯ್ಕೆಗೆ ಬೆಂಬಲ ನೀಡಿ, ಆಸಕ್ತಿಯನ್ನು ಬೆಳೆಸಬೇಕು. ತರಗತಿಗಳು ಮುಗಿದ ನಂತರ ಅಂತಹ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಎಂದರು. ಕಾರ್ಯಕ್ರಮದಲ್ಲಿ ಎಸ್​.ವಿ. ಸಂಕನೂರು ಅವರನ್ನು ಸನ್ಮಾನಿಸಲಾಯಿತು

ಕರ್ನಾಟಕ ವಿಶ್ವವಿದ್ಯಾಲಯ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ವಿ ಆರ್​ ಕುಷ್ಟಗಿ ಮೆಮೋರಿಯಲ್​ ಮಹಾವಿದ್ಯಾಲಯಕ್ಕೆ ಸತತ ಐದನೇ ವರ್ಷ ಸಮಗ್ರ ವಿರಗ್ರಾಣಿ ಪ್ರಶಸ್ತಿ ಪಡೆದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಕೆ. ವಿ. ಕುಷ್ಟಗಿ ಅಭಿನಂದನೆ ಸಲ್ಲಿಸಿದರು.

ಎ. ಡಿ. ಗೋಡಕಿಂಡಿ, ಕೆ. ಗಿರಿರಾಜಕುಮಾರ, ವಿ. ಟಿ. ನಾಯಕ, ಬಿ. ಪಿ. ಜೈನರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net