Gadag: ನಗರದ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ನೆಹರು ಯುವ ಕೇಂದ್ರ, ಗದಗ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಲೈನ್ಸ್ ಶಿಕ್ಷಣ ಸಂಸ್ಥೆ ಹಾಗೂ ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ. 2024-25 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಯುವಜನೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗದುಗಿನ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಕಾಮರ್ಸ್ ವಿದ್ಯಾರ್ಥಿಗಳು ಜನಪದ ನೃತ್ಯ ಸಮೂಹ, ಜನಪದ ನೃತ್ಯ ವೈಯಕ್ತಿಕ, ಫೋಟೋಗ್ರಾಫಿ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಇದೆ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಲ್ಲ ಸ್ಪರ್ದಾಳುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಠಗಿ, ಚೇರ್ಮನ್ ಶ್ರೀ ಆನಂದ್ ಪೋತ್ನಿಸ್, ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿ ಶ್ರೀ ಜಿ ವಿ ಬಳಗಾನೂರ, ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಕಿಂಡಿ, ಸಹಕಾರದರ್ಶಿಗಳಾದ ಶ್ರೀ ಬೆನಕನಾಳ್ ಸಂಸ್ಥೆಯ ಸರ್ವ ಸದಸ್ಯರು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಉಪ ಪ್ರಾಚಾರ್ಯರ ಹಾಗೂ ಐ ಕ್ಯೂ ಏ ಸಿ ಕೋ-ಆರ್ಡಿನೇಟರ್ ಡಾ. ವಿ. ಟಿ ನಾಯ್ಕರ್ ತಂಡದ ಮುಖ್ಯಸ್ಥರಿಗೆ ಹಾಗೂ ಕಲಾ ವಿಭಾಗದ ಕಾರ್ಯದರ್ಶಿ ಆದರ್ಶ ಅಕ್ಕಿ , ಸ್ಪರ್ಧಾಳಗಳಾದ ಸಾಗರ್ ಬಡಿಗೇರ್, ವರ್ಷ ಕಲ್ಕಂಬಿ, ಅಭಿಷೇಕ್ ಮಾಗಡಿ, ಗೌರಮ್ಮ ಕಲ್ಬಂಡಿ, ಸಂತೋಷ್ ಶಿರೂರು, ಭಾಗ್ಯ ಶಾನುವಾಡ, ನೇತ್ರಾವತಿ ನಿಲುಗಲ್, ಪೂಜಾ ತಂತ್ರಿ ಸಹನ ತಳಕಲ್,ಅಶ್ವಿನಿ ತಿರ್ಲಾಪುರ್ ಉಳಿದೆಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಅಭಿನಂದಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಶುಭವನ್ನ ಹಾರೈಸಿದರು.