ಪ್ರೊ. ಪಿ. ಬಿ. ತಾಳಿ ಸ್ವಾಗತಿಸಿದರು. ಪ್ರೊ. ವಿ. ಪಿ. ಪಾಟೀಲ ವಂದಿಸಿದರು. ಮುಂದೆ ಬರುವ 2025-26 ನೇ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಪ್ರಶಿಕ್ಷಣಾರ್ಥಿಗೆ ಉಪನ್ಯಾಸಕರಾದ ಕಿಶೋರಬಾಬು. ಜೆ. ನಾಗರಕಟ್ಟಿ ಅವರು ಬಂಗಾರದ ಪದಕವನ್ನು ಘೋಷಿಸಿದರು. ಕೊನೆಗೆ ಪ್ರಶಿಕ್ಷಣಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಪ್ರೊ. ದತ್ತಪ್ರಸನ್ನ ಪಾಟೀಲ ಅವರು ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಅತಿಥಿಮಹನಿಯರು, ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಶಿಕ್ಷಣಾರ್ಥಿಗಳ ಪ್ರತಿನಿಧಿಗಳು, ಶ್ರೀ ಎಂ. ಆರ್. ಡೊಳ್ಳಿನ, ಸಮಸ್ತ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.